ಚಹಾ, ಜಗತ್ತಿನ ಅತ್ಯಂತ ಜನಪ್ರಿಯ ಪೇಯಗಳಲ್ಲಿ ಒಂದು. ಜಗತ್ತಿನ ಯಾವುದೇ ಮೂಲೆಗೂ ನಿಶ್ಚಿಂತೆಯಾಗಿ ಚಹಾವನ್ನು ಆರಾಮವಾಗಿ ಕೊಂಡೊಯ್ಯಬಹುದಾಗಿದೆ.
ಆದರೆ ಆಸ್ಟ್ರೇಲಿಯಾದ ವುನ್ ಪುಯಿ ’ಕೊನ್ನಿ’ ಚಾಂಗ್ ಹಾಗೂ ಆಕೆಯ ಪುತ್ರಿ ಶಾನ್ ಯಾನ್ ಮೆಲಾಯ್ನಿಗೆ ಈ ಮಾತು ಹೇಳಲಾಗದು. ಇವರು ಕೊಂಡೊಯ್ಯುತ್ತಿದ್ದ ಚಹಾ ಪುಡಿಯನ್ನು ಡ್ರಗ್ಸ್ ಎಂದು ಪೊಲೀಸರು ತಪ್ಪಾಗಿ ಭಾವಿಸಿದ ಕಾರಣ ಅಮ್ಮ-ಮಗಳು ನಾಲ್ಕು ತಿಂಗಳು ಜೈಲಿನಲ್ಲಿ ಕಳೆಯಬೇಕಾಗಿ ಬಂದಿದೆ.
ಅಮ್ಮ-ಮಗಳು 25 ಕೆಜಿಯಷ್ಟು ಕಂದು ಬಣ್ಣದ ಶುಂಠಿ ಚಹಾ ತರಿಸಿಕೊಂಡಿದ್ದರು. ಈ ಚಹಾಪುಡಿಯನ್ನು ಅಮ್ಮ-ಮಗಳು ಲಾಭಕ್ಕೆ ಮಾರಲು ಇಚ್ಛಿಸಿದ್ದರು. ಆದರೆ ಇವರ ಬ್ಯುಸಿನೆಸ್ ಪ್ಲಾನ್ ಎಲ್ಲಾ ದಿಕ್ಕಾಪಾಲಾಗಿಬಿಟ್ಟಿತು.
ಮರಣೋತ್ತರ ಪರೀಕ್ಷೆಗೆ ಮೊದಲು ಬದುಕಿ ಬಂದ ಶವಾಗಾರದಲ್ಲಿದ್ದ ವ್ಯಕ್ತಿ
ವಿಮಾನ ನಿಲ್ದಾಣವೊಂದರಲ್ಲಿ ಆಸ್ಟ್ರೇಲಿಯಾದ ಗಡಿ ಭದ್ರತೆ (ಎಬಿಎಫ್) ಪೊಲೀಸರು ಚಹಾಪುಡಿಯನ್ನು ಆಂಪೆತಾಮೈನ್ ಡ್ರಗ್ ಆದ ಫೆನ್‌ಮೆಟ್ರಾಜ಼ೈನ್ ಎಂದು ಭಾವಿಸಿ ವಶಕ್ಕೆ ಪಡೆದಿದ್ದಾರೆ.
ಡ್ರಗ್ ದಂಧೆ ಮೇಲೆ ರೇಡ್ ಮಾಡುವ ಶೈಲಿಯಲ್ಲಿ, ಸಿಡ್ನಿಯಲ್ಲಿ ಅಮ್ಮ-ಮಗಳ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಇಬ್ಬರನ್ನೂ ಬಂಧಿಸಿ, ಅವರ ವಿರುದ್ಧ ಮಾದಕ ದ್ರವ್ಯ ಪೂರೈಕೆಯ ಆರೋಪಪಟ್ಟಿ ಸಿದ್ಧಪಡಿಸಿದ್ದರು. ಮಾದಕ ದ್ರವ್ಯಗಳ ಖಾತ್ರಿಗೆ ಮಾಡುವ ಪರೀಕ್ಷೆಯ ನಂತರವೇ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
BIG SHOCKING: ಪುಲ್ವಾಮಾ ದಾಳಿಯಲ್ಲಿ ಬಳಸಿದ ಬಾಂಬ್ ರಾಸಾಯನಿಕ ಬಂದಿದ್ದು ಅಮೆಜಾನ್ ಮೂಲಕ…!
ಅಮ್ಮ-ಮಗಳನ್ನು ಜಾಮೀನುರಹಿತವಾಗಿ ಬಂಧಿಸಲಾಗಿತ್ತು. ನ್ಯೂ ಸೌತ್ ವೇಲ್ಸ್ ಪೊಲೀಸ್ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ವಶಪಡಿಸಿಕೊಂಡ ಮಾಲಿನ ಪರೀಕ್ಷೆ ನಡೆಸಿದ ಬಳಿಕ ಅದು ಚಹಾಪುಡಿ ಎಂದು ತಿಳಿದು ಬಂದಿದೆ.
ಇದಾದ ಬಳಿಕ ಆಸ್ಟ್ರೇಲಿಯಾದ ಫೆಡರಲ್ ಪೊಲೀಸ್‌ನ ವಿಧಿ ವಿಜ್ಞಾನದ ಸಿಬ್ಬಂದಿ ಮೇಲ್ಕಂಡ ಪ್ರಕರಣದ ತನಿಖಾಧಿಕಾರಿಗೆ ಪತ್ರ ಬರೆದು, ಮೊದಲು ಮಾಡಿದ್ದ ಪ್ರಯೋಗದ ಫಲಿತಾಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಅಮ್ಮ-ಮಗಳ ಬಳಿ ನಿಷೇಧಿಸಲ್ಪಟ್ಟ ಯಾವುದೇ ವಸ್ತು ಇರಲಿಲ್ಲ ಎಂದು ಬಳಿಕ ತಿಳಿದುಬಂದಿದೆ. ಆಗಿರುವ ಪ್ರಮಾದದ ಬಗ್ಗೆ ತಿಳಿದುಕೊಂಡ ಕೋರ್ಟ್, ಪರೀಕ್ಷೆಗಳ ಫಲಿತಾಂಶಗಳು ಹೀಗೆ ಎಡವಟ್ಟಾಗಿ ಬಾರದೇ ಇದ್ದಲ್ಲಿ ಅಮ್ಮ-ಮಗಳು ಜೈಲಿನಲ್ಲಿ ಇರಬೇಕಾದ ಅಗತ್ಯವೇ ಇರುತ್ತಿರಲಿಲ್ಲ ಎಂದಿದೆ.