ಬೆಂಗಳೂರು: ಪೊಲೀಸ್ ಇಲಾಖೆಯ 4115 ಹುದ್ದೆ ಸೇರಿ ಗೃಹ ಇಲಾಖೆಯ ಒಟ್ಟು 5987 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.
ಪೋಲಿಸ್ ಇಲಾಖೆಯ 4115 ಕಾನ್ಸ್ಟೇಬಲ್, ಗೃಹ ಇಲಾಖೆಯ 1872 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗುವುದು. ವಿಧಾನ ಸಭೆಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಗೃಹ ಸಚಿವರು ಈ ಬಗ್ಗೆ ಉತ್ತರ ನೀಡಿದ್ದಾರೆ.
ಆರ್ಥಿಕ ಇಲಾಖೆ ಅನುಮೋದನೆ ನೀಡಿದ ಅನೇಕ ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದೀಗ ಸಿಎಆರ್/ಡಿಎಆರ್ 2000 ಹುದ್ದೆ, ಕೆಎಸ್ಆರ್ಪಿ 1,500 ಹುದ್ದೆ, ಪೊಲೀಸ್ ಸಬ್ ಇನ್ಸ್ಪೆಕ್ಟರ್ 2022 -23 300 ಹುದ್ದೆ, 2023 -24 300 ಹುದ್ದೆ, ವಿಶೇಷ ತನಿಖಾಧಿಕಾರಿ 15 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.