alex Certify ಮನೆ ಮುಂದೆ ಪಟಾಕಿ ಹೊಡೆದವರ ಕುರಿತು ವಂದನಾ ಕಟಾರಿಯಾ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮುಂದೆ ಪಟಾಕಿ ಹೊಡೆದವರ ಕುರಿತು ವಂದನಾ ಕಟಾರಿಯಾ ಪ್ರತಿಕ್ರಿಯೆ

ಒಲಿಂಪಿಕ್​​ ಸೆಮಿಫೈನಲ್​ನಲ್ಲಿ ಸೋಲು ಕಂಡ ಬಳಿಕ ಟೀಂ ಇಂಡಿಯಾ ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ತಮ್ಮ ಮನೆ ಮೇಲೆ ಎಸೆಗಲಾದ ಜಾತಿ ನಿಂದನೆಯ ಕುರಿತು ಪ್ರತಿಕ್ರಿಯಿಸಿಲು ನಿರಾಕರಿಸಿದ್ರು. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ನಾನೇನೂ ಹೇಳಲಾರೆ ಎಂದಿದ್ದಾರೆ.

ಬುಧವಾರ ಅರ್ಜೆಂಟೀನಾ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಮಹಿಳಾ ಹಾಕಿ ತಂಡ ಸೋತ ಬಳಿಕ ಇಬ್ಬರು ಮೇಲ್ವರ್ಗಕ್ಕೆ ಸೇರಿದ ಪುರುಷರು ಹರಿದ್ವಾರದ ರೋಶ್ನಾಬಾದ್​ನಲ್ಲಿರುವ ಕಟಾರಿಯಾ ನಿವಾಸದ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

ಮನೆಯ ಮುಂದೆ ಗಲಾಟೆ ನಡೆಯುತ್ತಿರೋದನ್ನು ಗಮನಿಸಿದ ಕಟಾರಿಯಾ ಕುಟುಂಬಸ್ಥರು ಹೊರಬರುತ್ತಿದ್ದಂತೆಯೇ ಆ ಪುರುಷರು ದಲಿತ ಆಟಗಾರರು ಹಾಕಿ ತಂಡದಲ್ಲಿ ಇದ್ದಿದ್ದರಿಂದಲೇ ಭಾರತ ಈ ಪಂದ್ಯವನ್ನು ಸೋತಿದೆ. ಮಾತ್ರವಲ್ಲದೇ ದಲಿತ ಆಟಗಾರರನ್ನು ಆಟಕ್ಕೆ ಸೇರಿಸಿಕೊಳ್ಳಲೇಬಾರದು ಎಂದು ಕೂಗಿದ್ದರು.

ಈ ಪ್ರಕರಣ ಸಂಬಂಧ ಮಾತನಾಡಿದ ವಂದನಾ ಕಟಾರಿಯಾ, ಈ ವಿಚಾರವಾಗಿ ನಾನು ಯಾವುದೇ ಹೇಳಿಕೆ ನೀಡೋದಿಲ್ಲ. ಇದರ ಬಗ್ಗೆ ನಾನು ಅವರಿವರು ಹೇಳಿದ್ದನ್ನು ಕೇಳಿದ್ದೇನೆ. ನಾನು ಕುಟುಂಬಸ್ಥರಿಗೆ ಕರೆ ಮಾಡಿದ್ದೇನೆ. ಹಾಗೂ ಅವರೆಲ್ಲ ಈಗ ಕ್ಷೇಮವಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ರು.

ಪ್ರಕರಣ ಸಂಬಂಧ ಪೊಲೀಸರು ವಿಜಯ್​ ಪಾಲ್​ ಎಂಬಾತನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಐಪಿಸಿ ಸೆಕ್ಷನ್​ 504ರ ಅಡಿಯಲ್ಲಿ ಪ್ರಕರಣದ ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...