ಬೆಂಗಳೂರು: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಹಲಸೂರು ಠಾಣೆ ಇನ್ಸ್ ಪೆಕ್ಟರ್ ಅಮಾನತು ಮಾಡಲಾಗಿದೆ. ಪ್ರಕಾಶ್ ಅಮಾನತುಗೊಂಡ ಇನ್ಸ್ ಪೆಕ್ಟರ್.
ಈ ಹಿಂದೆ ಡಿಜೆ ಹಳ್ಳಿ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಕರ್ತವ್ಯ ಲೋಪ ಎಸಗಿದ್ದರು. ಗಾಂಜಾ ಸೀಜ್ ಮಾಡಿದ್ದ ವಾಹನವನ್ನು ಅಕ್ರಮವಾಗಿ ಬಿಟ್ಟಿದ್ದ ಆರೋಪ ಪ್ರಕಾಶ್ ಅವರ ಮೇಲಿದೆ. ಗಾಂಜಾ ಜಪ್ತಿ ಪ್ರಕರಣದಲ್ಲಿ ಆರೋಪಿಗಳ ಜೊತೆ ಶಾಮೀಲಾಗಿದ್ದ ಆರೋಪ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಪ್ರಕಾಶ್ ವಿರುದ್ಧ ದೂರು ದಾಖಲಾಗಿತ್ತು. ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರು ತನಿಖೆಗೆ ಆದೇಶಿಸಿದ್ದರು. ಆಂತರಿಕ ತನಿಖೆಯಲ್ಲಿ ಕರ್ತವ್ಯ ಲೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.