
ಕರ್ಕಶವಾಗಿ ಶಬ್ದ ಮಾಡುತ್ತಿದ್ದ ಬೈಕ್ ಸೈಲೆನ್ಸರ್ ಗಳಿಗೆ ಪೊಲೀಸರು ಬುಲ್ಡೋಜರ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಇಂಥದೊಂದು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಭಾನುವಾರದಂದು ಕೆಲ ಯುವಕರು ಚಿಕ್ಕಮಗಳೂರಿನ ಕೆಎಂ ರಸ್ತೆಯಲ್ಲಿ ಬೈಕಿನಲ್ಲಿ ವೀಲಿಂಗ್ ಮಾಡುತ್ತಾ ಸಾಗಿದ್ದರು. ಬೈಕುಗಳ ಸೈಲೆನ್ಸರ್ ಕರ್ಕಶ ಶಬ್ದಕ್ಕೆ ಸಾರ್ವಜನಿಕರು ಹೈರಾಣಾಗಿದ್ದರು.
ಈ ವಿಚಾರ ಪೊಲೀಸರ ಗಮನಕ್ಕೂ ಬಂದಿದೆ. ಸಂಜೆ ವೇಳೆಗೆ ಆರು ಬೈಕುಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಸೋಮವಾರದಂದು ಆ ಬೈಕ್ ಗಳ ಸೈಲೆನ್ಸರ್ ತೆಗೆದು ಅದರ ಮೇಲೆ ಬುಲ್ಡೋಜರ್ ಹತ್ತಿಸಿದ್ದಾರೆ.