alex Certify ಅಸಲಿಯತ್ತು ತಿಳಿಯದೇ 19 ಲಕ್ಷದ 400 ಗ್ರಾಂ ಚಿನ್ನಾಭರಣ ರಸ್ತೆ ಬದಿ ಕಸದ ರಾಶಿಗೆ ಎಸೆದ ಕಳ್ಳರು, ಕಾರಣ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸಲಿಯತ್ತು ತಿಳಿಯದೇ 19 ಲಕ್ಷದ 400 ಗ್ರಾಂ ಚಿನ್ನಾಭರಣ ರಸ್ತೆ ಬದಿ ಕಸದ ರಾಶಿಗೆ ಎಸೆದ ಕಳ್ಳರು, ಕಾರಣ ಗೊತ್ತಾ…?

ಬೆಂಗಳೂರು: ಬೆಂಗಳೂರಿನಲ್ಲಿ ನಾಲ್ವರು ಕಳ್ಳರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್, ಹರೀಶ್, ರಾಜೇಶ್, ರಾಜ್ ಕಿರಣ್ ಬಂಧಿತ ಆರೋಪಿಗಳು.

ಬಂಧಿತರಿಂದ 19.5 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ರಾಮಮೂರ್ತಿ ನಗರದ ಕುವೆಂಪು ಲೇಔಟ್ ನಲ್ಲಿ ಕಳ್ಳತನ ನಡೆದಿತ್ತು. ಕದ್ದಮಾಲು ಮಾರಾಟಕ್ಕೆ ಈ ತಂಡ ಹೊಸೂರಿಗೆ ಹೋಗಿತ್ತು. ಜುವೆಲ್ಲರಿ ಶಾಪ್ ನಲ್ಲಿ ಚಿನ್ನಾಭರಣ ಮಾರಾಟ ಮಾಡಲು ಇವರು ಯತ್ನಿಸಿದ್ದರು. ಈ ವೇಳೆ ಜುವೆಲ್ಲರಿ ಶಾಪ್ ಮಾಲೀಕ ನಕಲಿ ಚಿನ್ನ ಎಂದು ಹೇಳಿದ್ದಾರೆ.

ಬೇಸರದಲ್ಲಿ ರಸ್ತೆ ಬದಿಯಲ್ಲಿ ಈ ಗ್ಯಾಂಗ್ ಕಸದಲ್ಲಿ ಚಿನ್ನಾಭರಣ ಬಿಸಾಡಿತ್ತು. ಆಭರಣ ಕಳ್ಳತನವಾದ ಬಗ್ಗೆ ಮನೆ ಮಾಲೀಕ ಮಂಜುನಾಥ್ ದೂರು ದಾಖಲಿಸಿದ್ದರು. ಆರೋಪಿಗಳ ಜಾಡು ಬೆನ್ನು ಹತ್ತಿದ ರಾಮಮೂರ್ತಿನಗರ ಠಾಣೆ ಪೊಲೀಸರು ರಸ್ತೆ ಬದಿ ಕಸದಲ್ಲಿ ಆಭರಣ ಎಸೆದ ಬಗ್ಗೆ ಮಾಹಿತಿ ಪಡೆದು ಶೋಧ ಕಾರ್ಯ ಕೈಗೊಂಡಿದ್ದಾರೆ.

ಹೊಸೂರಿನ ರಸ್ತೆಯ ಬದಿಯಲ್ಲಿ 400 ಗ್ರಾಂ ಚಿನ್ನಾಭರಣ ಕಸದಲ್ಲಿ ಸಿಕ್ಕಿದೆ. ಕಳ್ಳತನದ ವೇಳೆ ಮನೆ ಮುಂದಿನ ಸಿಸಿ ಕ್ಯಾಮೆರಾವನ್ನು ಆರೋಪಿಗಳು ತಿರುಗಿಸಿದ್ದರು. ಆದರೆ, ಮನೆಯೊಳಗಿದ್ದ ಸಿಸಿ ಕ್ಯಾಮೆರಾವನ್ನು ಆರೋಪಿಗಳು ಗಮನಿಸಿರಲಿಲ್ಲ. ಅದರ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...