ಕಾರವಾರ: ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ಮಾಂಸ ಕದ್ದೊಯ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಪೊಲೀಸರ ಮೇಲೆಯೇ ದಾಳಿ ಮಾಡಿ ಹಲ್ಲೆಗೆ ಯತ್ನಿಸಿದ ಹಿನ್ನಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕಾಸರಕೋಡು ಬಳಿ ಘಟನೆ ನಡೆದಿದೆ. ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿ ಫೈಜಲ್ ಗೆ ಚಿಕಿತ್ಸೆ ಕೊಡಿಸಲಾಗಿದೆ.
ಹೊನ್ನಾವರ ತಾಲೂಕಿನ ಸಾಲ್ಕೊಡು ಕೊಂಡಕುಳಿ ಗ್ರಾಮದ ಬಳಿ ಹಸುವನ್ನು ಹತ್ಯೆ ಮಾಡಿ ಮಾಂಸವನ್ನು ಮದುವೆ ಕಾರ್ಯಕ್ರಮಕ್ಕೆ ಪೂರೈಸಿದ್ದರು. ಪೊಲೀಸರು ಈ ಮೊದಲೇ ಆರೋಪಿ ಹೊನ್ನಾವರದ ತೌಫಿಕ್ ಬಂಧಿಸಿದ್ದರು. ಇಂದು ಇನ್ನೊಬ್ಬ ಆರೋಪಿ ಫೈಜಲ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.