ಬೆಂಗಳೂರು: ಸಾರ್ವಜನಿಕರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದ ಸೈಬರ್ ವಂಚಕರು ಇದೀಗ ಪೊಲೀಸರಿಗೂ ಕಾಟ ಕೊಡಲು ಶುರು ಮಾಡಿದ್ದಾರೆ. ಬೆಂಗಳೂರು ಪೊಲೀಸ್ ಅಧಿಕಾರಿಗಳ ವಾಟ್ಸಪ್ ಖಾತೆಗಳನ್ನು ಕೂಡ APK ಫೈಲ್ ಗಳನ್ನು ಬಳಸಿ ಹ್ಯಾಕ್ ಮಾಡುತ್ತಿದ್ದಾರೆ.
ಬೆಂಗಲೂರಿನ ಹಲವು ಪೊಲೀಸ್ ಇನ್ಸ್ ಪೆಕ್ಟರ್ ಗಳ ಮೊಬೈಲ್ ಫೋನ್ ಸಂಖ್ಯೆಗಳು ಮತ್ತು ವಾಟ್ಸಪ್ ಖಾತೆಗಳು ಹ್ಯಾಕ್ ಆಗಿವೆ. ಎಪಿಕೆ ಫೈಲ್ ಲಿಂಕ್ ಕಳುಹಿಸಿ ಸೈಬರ್ ವಂಚಕರು ಹ್ಯಾಕ್ ಮಾಡಿದ್ದಾರೆ.
ಆಡುಗೋಡಿ ಟ್ರಾಫಿಕ್ ಮತ್ತು ಜ್ಞನಭಾರತಿ, ಗಿರಿನಗರ ಹಾಗೂ ಬಸವನಗುಡಿ ಠಾಣೆ ಸೇರಿದಂತೆ ಕೆಲ ಠಾಣೆಗಳ ಇನ್ಸ್ ಪೆಕ್ಟರ್ಗಳು, ಪೊಲೀಸ್ ಸಿಬ್ಬಂದಿಗಳ ಮೊಬೈಲ್, ವಾಟ್ಸಾಪ್ ಖಾತೆ ಹ್ಯಾಕ್ ಆಗಿದೆ. ಬೆಳಗಾವಿಗೆ ವಿಶೇಷ ಕರ್ತವ್ಯದ ಮೇಲೆ ತೆರಳಿದ್ದ ಪೊಲೀಸ್ ಅಧಿಕಾರಿಯ ವಟ್ಸಪ್ ಖಾತೆ ಕೂಡ ಹ್ಯಾಕ್ ಆಗಿದೆ. ಅವರ ಮೊಬೈಲ್ ನಲ್ಲಿರುವೀಲ್ಲಾ ಕಾಂಟಾಕ್ಟ್, ಗುಂಫುಗಳಿಗೆ ಅವರ ಸಂಖ್ಯೆಯನ್ನು ಕಳುಹಿಸಲಾಗಿದೆ. ಬೆಳಗವೈ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.