alex Certify BIG NEWS: ಪೊಲೀಸ್ ಕಾನ್ಸ್ ಟೇಬಲ್ ನಿಂದಲೇ ದುಷ್ಕೃತ್ಯ: ಪ್ರೇಯಸಿ ಪತಿಯ ಕೊಲೆಗೆ ಯತ್ನ: ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪೊಲೀಸ್ ಕಾನ್ಸ್ ಟೇಬಲ್ ನಿಂದಲೇ ದುಷ್ಕೃತ್ಯ: ಪ್ರೇಯಸಿ ಪತಿಯ ಕೊಲೆಗೆ ಯತ್ನ: ಆರೋಪಿ ಅರೆಸ್ಟ್

ಕೊಡಗು: ಪೊಲೀಸ್ ಕಾನ್ಸ್ ಟೇಬಲ್ ಓರ್ವ ಕೊಲೆ ಯತ್ನ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವರಾಪೇಟೆ ತಾಲೂಕಿನ ಶನಿವಾರಸಂತೆ ಗ್ರಾಮದಲ್ಲಿ ನಡೆದಿದೆ.

ಕೊಟ್ರೇಶ್ (30) ಕೊಲೆ ಆರೋಪಿ ಪೊಲೀಸ್ ಪೇದೆ. ಕೊಟ್ರೇಶ್ ಆಯೀಷಾ ಎಂಬ ಮಹಿಳೆಯ ಪಕ್ಕದ ಮನೆಯಲ್ಲೇ ವಾಸವಾಗಿದ್ದ. ಅಲ್ಲದೇ ಆಯೀಷಾ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪವೂ ಕೇಳಿಬಂದಿದೆ. ತಡರಾತ್ರಿ ಆಯೀಷಾ ಮನೆಗೆ ಬಂದ ದುರುಳ, ಆಯೀಷಾ ಪತಿ ಇಫ್ರಾಜ್ ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.

ಇಫ್ರಾಜ್ ಮಲಗಿದ್ದ ವೇಳೆ ದಿಂಬಿನಿಂದ ಉಸಿರುಗಟ್ಟಿಸಿ, ಹತ್ಯೆ ಮಾಡಲು ಕೊಟ್ರೇಶ್ ಯತ್ನಿಸಿದ್ದು, ಈ ವೇಳೆ ಆಯಿಷಾ ಅಕ್ಕನ ಮಗ ತಡೆದಿದ್ದಾನೆ. ಆರೋಪಿಯಿಂದ ಬಚಾವಾದ ಇಫ್ರಾಜ್ ಪೊಲೀಸರಿಗೆ ದೂರು ನೀಡಲು ಮುಂದಾದರೂ ಕೊಟ್ರೇಶ್ ವಿರುದ್ಧ ದೂರು ದಾಖಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬಳಿಕ ಇಫ್ರಾಜ್ ಕೊಡಗು ಎಸ್ ಪಿ ರಾಮರಾಜನ್ ಅವರಿಗೆ ದೂರು ನೀಡಿದ್ದಾರೆ. ಎಸ್ ಪಿ ಸೂಚನೆ ಮೇರೆಗೆ ಕೊಟ್ರೇಶ್ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...