ಆಕ್ಷೇಪಾರ್ಹ ಸಾಹಿತ್ಯವಿರುವ ಹಾಡಿನಲ್ಲಿ ‘ಭೋಲೆನಾಥ್’ ಪದವನ್ನು ಬಳಸಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಗಾಯಕ ಬಾದ್ಶಾ ವಿರುದ್ಧ ಮಧ್ಯಪ್ರದೇಶದ ಇಂದೋರ್ನಲ್ಲಿ ದೂರು ದಾಖಲಾಗಿದೆ.
‘ಪರಶುರಾಮ ಸೇನೆ’ ಎಂಬ ಸಂಘಟನೆಯು ದೂರು ಸಲ್ಲಿಸಿದ್ದು, ಆರೋಪಗಳ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಂಜಿ ರಸ್ತೆ ಪೊಲೀಸ್ ಠಾಣೆ ಪ್ರಭಾರಿ ಸಂತೋಷ್ ಸಿಂಗ್ ತಿಳಿಸಿದ್ದಾರೆ.
ಸಂಘಟನೆಯ ವಕೀಲ ವಿನೋದ್ ದ್ವಿವೇದಿ ಅವರು ಮಾತನಾಡಿ ಬಾದ್ ಶಾ ಅವರ ಹೊಸ ಹಾಡು ‘ಸನಕ್’ ನಲ್ಲಿ ಆಕ್ಷೇಪಾರ್ಹ ಸಾಹಿತ್ಯವಿದೆ ಮತ್ತು ಅದರಲ್ಲಿ ‘ಭೋಲೆನಾಥ್’ ಪದದ ಬಳಕೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದರು. ಎಂಜಿ ರಸ್ತೆ ಪೊಲೀಸ್ ಠಾಣೆ ಎದುರು ಕೆಲವರು ಪ್ರತಿಭಟನೆ ನಡೆಸಿ 37 ವರ್ಷದ ಗಾಯಕ ಬಾದ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.