ನವದೆಹಲಿ: ನೈಋತ್ಯ ದೆಹಲಿಯ ಮಹಿಪಾಲ್ ಪುರದ ಹೋಟೆಲ್ ಮೇಲೆ ದಾಳಿ ಮಾಡಿದ ಪೊಲೀಸರು ಸೆಕ್ಸ್ ರಾಕೆಟ್ ಭೇದಿಸಿದ್ದು, ಹೋಟೆಲ್ ಮ್ಯಾನೇಜರ್ ಸೇರಿ 14 ಮಂದಿಯನ್ನು ಬಂಧಿಸಿದ್ದಾರೆ.
ಪೊಲೀಸರು ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಅನೈತಿಕ ಕಳ್ಳಸಾಗಣೆ(ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 29 ರಂದು ವಸಂತ್ ಕುಂಜ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ದೆಹಲಿಯ ಮಹಿಪಾಲ್ ಪುರದಲ್ಲಿ ಸೆಕ್ಸ್ ರ್ಯಾಕೆಟ್ ನಡೆಸುತ್ತಿರುವ ಬಗ್ಗೆ ಸುಳಿವು ಸಿಕ್ಕಿದೆ. ದಾಳಿ ವೇಲೆ 7 ಮಹಿಳಾ ಲೈಂಗಿಕ ಕಾರ್ಯಕರ್ತರು ಮತ್ತು ಗ್ರಾಹಕರನ್ನು ಸಹ ಬಂಧಿಸಲಾಗಿದೆ.
ಪ್ರಾಥಮಿಕ ಪರಿಶೀಲನೆಯ ನಂತರ, ಮಹಿಪಾಲ್ ಪುರದ ಹೋಟೆಲ್ ಸ್ವೀಟ್ ಪ್ಯಾಲೇಸ್ನಲ್ಲಿ ಡಿಕಾಯ್ ಗ್ರಾಹಕರ ಸಹಾಯದಿಂದ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಹಕರು, ಮ್ಯಾನೇಜರ್ ಸುರೇಂದರ್ ಮತ್ತು ಬ್ರೋಕರ್ ಮಹಾವೀರ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಅನ್ನು ಸೀಲ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾವೀರ್ ಹುಡುಗಿಯರನ್ನು ವ್ಯವಸ್ಥೆ ಮಾಡಿ ಡ್ರೈವರ್ ಜೊತೆ ಹೋಟೆಲ್ ಗೆ ಕರೆತರುತ್ತಿದ್ದ. ಮಹಿಳೆಯರು ತುಂಬಾ ಬಡವರಾಗಿದ್ದು, ಲೈಂಗಿಕ ಕೆಲಸಕ್ಕೆ ಒಪ್ಪಿಕೊಳ್ಳುತ್ತಿದ್ದರು. ಗ್ರಾಹಕರಿಗೆ ಹುಡುಗಿಯರ ಆಯ್ಕೆಗೆ ಅವಕಾಶವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಲೈಂಗಿಕ ಕಾರ್ಯಕರ್ತೆಯರನ್ನು ಹೋಟೆಲ್ ಗೆ ಕರೆದೊಯ್ಯಲು ಬಳಸಿದ ಕಾರ್ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.