ಮಧುರೈ: ಮಧುರೈನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ನಾರಿಮೇಡು ಪ್ರದೇಶದಲ್ಲಿರುವ ಆಯುರ್ವೇದ ಮಸಾಜ್ ಕೇಂದ್ರದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ತಲ್ಲಕುಲಂ ಠಾಣೆ ಪೊಲೀಸರಿಗೆ ಮಾಹಿತಿ ಬಂದಿದೆ. ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಲಾಗಿದೆ.
ಮಸಾಜ್ ಕೇಂದ್ರದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ದಾಳಿಯ ವೇಳೆ ಗೊತ್ತಾಗಿದ್ದು, ಮಲ್ಲಪುರಂ ನಿವಾಸಿ ಎಂ. ಮೊಹಮ್ಮದ್ ಉಸ್ಮಾನ್ ಮತ್ತು ಎಸ್. ಮಹೇಶ್ ಎಂಬುವರನ್ನು ಬಂಧಿಸಲಾಗಿದೆ. ಇವರೊಂದಿಗೆ ಇಬ್ಬರು ಮಹಿಳೆಯನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಮೂವರ ಬಂಧನಕ್ಕೆ ಹುಡುಕಾಟ ನಡೆಸಲಾಗಿದ್ದು ದಾಳಿಯ ವೇಳೆ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ.