
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ಹೊಸಮನೆ ಬಡಾವಣೆ ಪೊಲೀಸರಿಂದ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದೆ.
ಶಿವಮೊಗ್ಗದ ಎಸ್ಪಿ ಕಚೇರಿಗೆ ಭದ್ರಾವತಿ ಹೊಸಮನೆಯ ವಿಜಯನಗರ ನಿವಾಸಿಗಳಾದ ಅನಿಲ್ ಕುಮಾರ್ ಮತ್ತು ದೀಪಕ್ ದೂರು ನೀಡಿದ್ದಾರೆ. ಹೊಸಮನೆ ಠಾಣೆ ಪಿಎಸ್ಐ ಸೇರಿದಂತೆ ಮೂವರ ವಿರುದ್ಧ ದೌರ್ಜನ ನಡೆಸಿದ್ದಾಗಿ ಆರೋಪಿಸಲಾಗಿದೆ.
ಪಿಎಸ್ಐ ಕೃಷ್ಣಕುಮಾರ್, ಸಿಬ್ಬಂದಿ ತೇಜು ಮತ್ತು ಹನುಮಂತು ವಿರುದ್ಧ ದೌರ್ಜನ್ಯದ ಆರೋಪ ಮಾಡಲಾಗಿದೆ. ನಮ್ಮ ವಿರುದ್ಧ ಯಾವುದೇ ದೂರು ಇಲ್ಲದಿದ್ದರೂ ಠಾಣೆಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿ ಮೊಬೈಲ್, ಹಣ ಕಸಿದುಕೊಂಡಿದ್ದಾರೆ. ಕೇಳಿದಷ್ಟು ಹಣ ಕೊಡದಿದ್ದರೆ ಕೇಸು ಹಾಕಿ ಜೈಲಿಗೆ ಕಳಿಸುವುದಾಗಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.