ಪಿಹೆಚ್ಡಿ ಪದವಿಧರ ತಮಲ್ ದತ್ತಾ ನೀಡಿದ ದೂರಿನ ಆಧಾರದ ಮೇಲೆ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕ ಆರಿಂದಮ್ ಭಟ್ಟಾಚಾರ್ಯ ವಿರುದ್ಧ ಹರೇ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಟ್ಟಾಚಾರ್ಯ ವಿರುದ್ಧ ಐಪಿಸಿ ಸೆಕ್ಷನ್ 505 (1 ಬಿ), 506, ಹಾಗೂ 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಉಪನ್ಯಾಸಕ ಭಟ್ಟಾಚಾರ್ಯರನ್ನು ಇನ್ನೂ ಕಸ್ಟಡಿಗೆ ತೆಗೆದುಕೊಳ್ಳಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಭಟ್ಟಾಚಾರ್ಯರನ್ನು ಸಂಪರ್ಕ ಮಾಡಿದ ವೇಳೆ ಅವರು, ನಾನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ಪೊಲೀಸರ ಬಳಿ ಹೇಳಿದ್ದಾರೆ. ದೂರುದಾರ ವ್ಯಕ್ತಿಯು ತೃಣಮೂಲ ಕಾಂಗ್ರೆಸ್ ಬೆಂಬಲಿಗರಾಗಿದ್ದಾರೆ.
ಟಿಎಂಸಿ ಬೆಂಬಲಿತ ಪಶ್ಚಿಮ ಬಂಗಾಳ ಕಾಲೇಜು ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಂಘವು ಭಟ್ಟಾಚಾರ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದ ಪೋಸ್ಟ್ಗಳನ್ನು ಖಂಡಿಸಿದೆ.
ಏಪ್ರಿಲ್ 2012ರಲ್ಲಿ, ಜಾಧವ್ಪುರ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಉಪನ್ಯಾಸಕ ಅಂಬಿಕೇಶ್ ಮಹಾಪತ್ರಾ ಸಿಎಂ ಕಾರ್ಟೂನ್ ಫಾರ್ವಡ್ ಮಾಡಿದ್ದ ಕಾರಣಕ್ಕೆ ಬಂಧಿಸಲಾಗಿತ್ತು.