ಹುಬ್ಬಳ್ಳಿ: ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಎಸಿಪಿ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಟ್ರಾಫಿಕ್ ಎಸಿಪಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಠಾಣೆಯಲ್ಲಿಯೇ ಪೊಲೀಸರ ಎದುರು ಹಲ್ಲೆ ಮಾಡಿದ್ದಾರೆ. ಮರಳು ದಂಧೆ ಕಡಿವಾಣಕ್ಕೆ ಕಮಿಷನರ್ ಸೂಚನೆ ನೀಡಿದ್ದು, ಇದೇ ವಿಚಾರಕ್ಕೆ ಹಲ್ಲೆ ನಡೆದಿರಬಹುದೆಂದು ಹೇಳಲಾಗಿದೆ. ಹಲ್ಲೆ ವಿಡಿಯೋ ವೈರಲ್ ಆಗಿದ್ದು, ಅಧಿಕಾರಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ.