ಆನೇಕಲ್: ಕೊಲೆ ಆರೋಪಿಯೊಬ್ಬನನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಆರೋಪಿ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮಾಯಸಂದ್ರಬಳಿ ನಡೆದಿದೆ.
ಬೆಸ್ತಮಾನಹಳ್ಳಿ ಲೋಕೇಶ್ ಬಂಧಿತ ಆರೋಪಿ. ರೌಡಿ ಶೀಟರ್ ಮನೋಜ್ ಎಂಬಾತನ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಲೋಕೇಶ್, ಊರಿಗೆ ಬಂದಿರುವ ಸುದ್ದಿ ತಿಳಿದು ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು.
ಈ ವೇಳೆ ಲೋಕೇಶ್ ಗೆ ಶರನಾಗುವಂತೆ ಸೂಚಿಸಿದ್ದರೆ. ಆದರೆ ಆತ ಪೊಲೀಸರ ಮಾತು ಲೆಕ್ಕಿಸದೇ ಪೊಲೀಸ್ ಸಿಬ್ಬಂದಿ ಚನ್ನಬಸವ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇನ್ಸ್ ಪೆಕ್ಟರ್ ಮ್ಂಜುನಾಥ್ ಲೋಕೇಶ್ ಕಾಲಿಗೆ ಗುಂಡೆಟು ಹೊಡೆದು ಬಂಧಿಸಿದ್ದಾರೆ.
ಆರೋಪಿ ಹಾಗೂ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.