ಇತ್ತೀಚೆಗೆ, ಪೆರುವಿನ ಪೊಲೀಸ್ ಅಧಿಕಾರಿಗಳ ಗುಂಪೊಂದು ಹೈಟೆನ್ಶನ್ ವೈರ್ ನಲ್ಲಿ ನೇತಾಡುತ್ತಿದ್ದ ಪಾರಿವಾಳವನ್ನು ರಕ್ಷಿಸಿದ್ದಾರೆ. ಆದರೆ, ಹಕ್ಕಿಯ ರಕ್ಷಣೆ ಮಾಡುವುದು ಅಷ್ಟು ಸುಲಭದ್ದಾಗಿರಲಿಲ್ಲ.
ಹುಲಿ – ಕರಡಿ ಮುಖಾಮುಖಿ…! ಮುಂದೆ ನಡೆದಿದ್ದು ಊಹಿಸಲಾಗದ ಘಟನೆ
12 ಗಂಟೆಗಳಿಗೂ ಹೆಚ್ಚು ಕಾಲ ಹಕ್ಕಿ ವಿದ್ಯುತ್ ತಂತಿಯ ಮೇಲೆ ಸಿಲುಕಿಕೊಂಡಿದೆ ಎಂದು ಬರಾಂಕಾ ನೆರೆಹೊರೆಯ ನಿವಾಸಿಗಳು ಹೇಳಿದ್ದಾರೆ. ಹೌದು, ಪಾರಿವಾಳದ ರಕ್ಷಣೆಗಾಗಿ ಅವರುಗಳು ಛಾಯಾಗ್ರಾಹಕರು ಮತ್ತು ಪೊಲೀಸರು ಕೂಡ ಹೆಚ್ಚಾಗಿ ಬಳಸುವ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಿದ್ದಾರೆ.
ಅಪರೂಪದ ಎರಡು ತಲೆ, ಆರು ಕಾಲುಗಳುಳ್ಳ ಡೈಮಂಡ್ ಬ್ಯಾಕ್ ಟೆರಾಪಿನ್ ಆಮೆ ಜನನ
ಅಗ್ನಿಶಾಮಕ ಇಲಾಖೆಯ ಸಹಾಯವಿಲ್ಲದೆ ಎತ್ತರವನ್ನು ತಲುಪುವುದು ಅಸಾಧ್ಯವಾದ ಕಾರಣ, ಇಬ್ಬರು ಚತುರ ಅಧಿಕಾರಿಗಳು ಡ್ರೋನ್ ಗೆ ಚಾಕುವನ್ನು ಜೋಡಿಸಿ ಅದನ್ನು ಹೈ-ಟೆನ್ಶನ್ ವೈರ್ನತ್ತ ಕಳುಹಿಸಿದ್ದಾರೆ. ಡ್ರೋನ್ ಕ್ಯಾಮರಾದಲ್ಲಿ, ಹಕ್ಕಿಯು ತಲೆಕೆಳಗಾಗಿ ತೂಗಾಡುತ್ತಿರುವುದನ್ನು ತೋರಿಸುತ್ತದೆ. ಈ ನಿರ್ದಿಷ್ಟ ಕಾರಣಕ್ಕಾಗಿ ಡ್ರೋನ್ ಮೇಲೆ ಚಾಕುವನ್ನು ಜೋಡಿಸಲಾಯಿತು.
17 ವರ್ಷಗಳಿಂದ ಕಾಡಿನಲ್ಲೇ ವಾಸ, ಅಂಬಾಸಿಡರ್ ಕಾರೇ ಈತನ ಅರಮನೆ: ಸುಳ್ಯದ ವ್ಯಕ್ತಿಯ ಜೀವನಗಾಥೆ
ಅಧಿಕಾರಿಗಳು ಡಿಜೆಐ ಮಿನಿ ಡ್ರೋನ್ ಅನ್ನು ಹಕ್ಕಿಯ ತಲೆಯ ಕಡೆಗೆ ಎಚ್ಚರಿಕೆಯಿಂದ ಪ್ರಯೋಗಿಸಿದ್ದಾರೆ. ಡ್ರೋನ್ ನಲ್ಲಿದ್ದ ಬ್ಲೇಡ್ ಅಂತಿಮವಾಗಿ ಪಾರಿವಾಳದ ಪಾದಗಳಿಗೆ ಅಂಟಿಕೊಂಡಿದ್ದ ದಾರವನ್ನು ಕತ್ತರಿಸಿದೆ. ತಂತಿಯ ಕೆಳಗೆ ಹಾಕಿದ್ದ ಹಾಳೆಯ ಮೇಲೆ ಪಕ್ಷಿ ಸುರಕ್ಷಿತವಾಗಿ ಬಿದ್ದಿದೆ. ‘ಹೈಟೆಕ್’ ರಕ್ಷಣೆಯ ನಂತರ, ಪಕ್ಷಿಯನ್ನು ಆರೈಕೆ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಧಿಕಾರಿಗಳ ಈ ಕಲ್ಪನೆಯಿಂದ ಪ್ರಭಾವಿತರಾದ ನೆಟ್ಟಿಗರನ್ನು ಅವರನ್ನು ಪ್ರಶಂಸಿದ್ದಾರೆ.