
ಬೆಳಗಾವಿ: ಮರಾಠಿ ಮಾತನಾಡಿದಿರುವುದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಮರಾಠಿ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಾರುತಿ ಅಲಿಯಾಸ್ ತುಮರಿ ದತ್ತು ಚಂದಗಡಕರ, ರಾಹುಲ್ ರಾಜು ನಾಯ್ಡು, ಬಾಳು ಸುರೇಶ ಗೊಂಜೇಕರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಬೆಳಗಾವಿ ನಗರ ಸಾರಿಗೆ ಬಸ್ ನಿರ್ವಾಹಕ ಮಹದೇವ ಹುಕ್ಕೇರಿ ಅವರ ಮೇಲೆ ಶುಕ್ರವಾರ ಹಲ್ಲೆ ನಡೆಸಲಾಗಿತ್ತು. ಸುಳೇಬಾವಿ -ಬಾಳೇಕುಂದ್ರಿ ನಡುವೆ ಬಸ್ ನಿಲ್ಲಿಸಿ ಹಲ್ಲೆ ಮಾಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಗೆ ಕಂಡಕ್ಟರ್ ದೂರು ನೀಡಿದ್ದರು. ಆಧಾರ್ ತೋರಿಸಿ ಟಿಕೆಟ್ ನೀಡುವಂತೆ ಮರಾಠಿಯಲ್ಲಿ ಯುವಕ, ಯುವತಿ ಹೇಳಿದ್ದಾರೆ. ನನಗೆ ಮರಾಠಿ ಭಾಷೆ ಬರುವುದಿಲ್ಲ. ಕನ್ನಡದಲ್ಲಿ ಹೇಳಿ ಎಂದು ನಿರ್ವಾಹಕ ಹೇಳಿದಾಗ ಹಲ್ಲೆ ಮಾಡಿದ್ದರು.