ಬೆಳಗಾವಿ: ಅಂಗನವಾಡಿ ಮಕ್ಕಳು ತನ್ನ ಮನೆ ಅಂಗಳದಲ್ಲಿ ಹೂ ಕಿತ್ತರು ಎನ್ನುವ ಕಾರಣಕ್ಕೆ ಅಂಗನವಾಡಿ ಸಹಾಯಕಿ ಮೇಲೆ ಹಲ್ಲೆ ಮಾಡಿ ಮೂಗು ಕತ್ತರಿಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಬಸುರ್ತೇ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿ ಸುಗಂಧಾ ಅವರ ಮೇಲೆ ಹಲ್ಲೆ ಮಾಡಿ ಮೂಗು ಕತ್ತರಿಸಲಾಗಿತ್ತು. ಆರೋಪಿ ಕಲ್ಯಾಣಿ ಮೋರೆ(50) ಎಂಬುವನನ್ನು ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಗಂಧ ಮೋರೆ ಅವರ ಮೇಲೆ ಹಲ್ಲೆ ಮಾಡಿ ಮೂಗು ಕತ್ತರಿಸಿ ಕಲ್ಯಾಣಿ ಮೋರೆ ಪರಾರಿಯಾಗಿದ್ದ. ಪೊಲೀಸರು ಶೋಧ ಕಾರ್ಯ ನಡೆಸಿ ಗುರುವಾರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಗಾಯಗೊಂಡಿದ್ದ ಸುಗಂಧಾ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.