
ಬೆಂಗಳೂರು: ವಾಹನ ತಪಾಸಣೆ ವೇಳೆ ಪೊಲೀಸರ ಬೈಕ್ ಗೆ ಕಾರು ಗುದ್ದಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹದೇವಸ್ವಾಮಿ ಬಂಧಿತ ಆರೋಪಿ. ಘಟನೆಯಲ್ಲಿ ಮಾಗಡಿ ಠಾಣೆ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಸಿಬ್ಬಂದಿ ದೂರು ಆದರಿಸಿ ಮಾಗಡಿ ರೋಡ್ ಠಾಣೆಯಲ್ಲಿ ಕೊಲೆಯತ್ನ ಕೇಸ್ ದಾಖಲಾಗಿತ್ತು.
ಮಾರ್ಚ್ 3ರಂದು ರಾತ್ರಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಟಾಟಾ ಆಲ್ಟ್ರೋಜ್ ಕಾರಿನಲ್ಲಿ ಬಂದ ಮಹದೇವ್ನನ್ನು ತಪಾಸಣೆಗಾಗಿ ಪೊಲೀಸ್ ಸಿಬ್ಬಂದಿ ಕಾರು ತಡೆದಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಹಾಗೂ ಬೈಕ್ ಗೆ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದನು. ಘಟನೆಯಲಿ ಹೆಚ್ ಸಿ ಧರೆಪ್ಪ, ಪಿಸಿ ಕಾರ್ತಿಕ್ ಗಾಯಗೊಂಡಿದ್ದರು. ಸದ್ಯ ಆರೋಪಿ ಮಹದೇವಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.