ರಷ್ಯಾ ಸೇನೆಯ ಆಕ್ರಮಣದಿಂದ ಉಕ್ರೇನ್‌ನಲ್ಲಿ ಸ್ಥಳೀಯರು ಸೇರಿದಂತೆ ಭಾರತದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ನಿತ್ಯ ನೂರಾರು ಶೆಲ್ ಹಾಗೂ ಕ್ಷಿಪಣಿ ದಾಳಿಗಳಿಂದ ಯುದ್ಧದ ಕಾರ್ಮೋಡ ಕವಿದಿರುವ ಉಕ್ರೇನ್‌ನಲ್ಲಿ ಯಾವುದೇ ಕ್ಷಣದಲ್ಲಿ ಬೇಕಾದರೂ ಸ್ಫೋಟದಲ್ಲಿ ಜನರು ಪ್ರಾಣ ಕಳೆದುಕೊಳ್ಳುವ ಭಯದ ಸ್ಥಿತಿ ಇದೆ.
ಬಂಕರ್‌ಗಳಲ್ಲಿ ಆಶ್ರಯ ಪಡೆದಿರುವ ಜನರು, ಭಾರತೀಯ ವಿದ್ಯಾರ್ಥಿಗಳು ತೆರವು ಕಾರ್ಯಾಚರಣೆಗಾಗಿ ಕಿಲೋಮೀಟರ್‌ಗಟ್ಟಲೆ ನಡೆದುಕೊಂಡು ಗಡಿಯಲ್ಲಿನ ರಾಷ್ಟ್ರಗಳಿಗೆ ತಲುಪಬೇಕಿದೆ. ಇಲ್ಲವಾದರೆ, ಆಹಾರದ ಕೊರತೆಯಿಂದ ಬಂಕರ್‌ಗಳಲ್ಲೇ ಸಾವನ್ನಪ್ಪುವ ಭೀತಿ ಇದೆ.
ಉಕ್ರೇನ್ ಗಡಿ ರಾಷ್ಟ್ರಗಳಾದ ಪೊಲೆಂಡ್, ರೊಮೆನಿಯಾ, ಸ್ಲೊವಾಕಿಯಾ, ಹಂಗೇರಿ ಮತ್ತು ಮೊಲ್ಡೊವಾ ತಲುಪಿದ ವಿದ್ಯಾರ್ಥಿಗಳನ್ನು ವಿಶೇಷ ವಿಮಾನಗಳಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ.
ಈ ಸಮಯದಲ್ಲಿ ನೆನಪಿಗೆ ಬರುವುದು ಗುಜರಾತಿನ ಕಾಠಿಯಾವಾಡ್ ಪ್ರಾಂತ್ಯದ ನವನಗರದ ಮಹಾರಾಜರಾಗಿದ್ದ ದಿಗ್ವಿಜಯ್‌ಸಿಂಗ್‌ಜೀ ರಣಜೀತ್‌ಸಿಂಗ್‌ಜೀ ಜಡೇಜಾ ಅವರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನೂರಾರು ಪೊಲೆಂಡ್‌ನ ಮಕ್ಕಳಿಗೆ ಈ ಮಹಾರಾಜರು ಆಶ್ರಯ ಕಲ್ಪಿಸಿ ರಕ್ಷಣೆ ನೀಡಿದ್ದರು. ಆ ವೇಳೆ ಅಡಾಲ್ಫ್ ಹಿಟ್ಲರ್‌ನ ಅರಾಜಕತೆಯಿಂದ ಎರಡನೇ ಮಹಾಯುದ್ಧ ಜರ್ಮನಿಯನ್ನು ರಣರಂಗವಾಗಿಸಿತ್ತು.
2 ರಿಂದ 17 ವರ್ಷದ 500 ಪೊಲೆಂಡ್ ಮೂಲದ ಮಕ್ಕಳನ್ನು ಬಂಧಿಸಿ, ಅವರನ್ನು ಸೋವಿಯತ್ ರಾಷ್ಟ್ರದ ಜೈಲುಗಳಿಗೆ ಕಳುಹಿಸಲಾಗುತ್ತಿತ್ತು. ಅದಕ್ಕಾಗಿ ಹಡಗಿನಲ್ಲಿ ಸಾಗಿಸಲಾಗುತ್ತಿತ್ತು. ಅವರು ಗುಜರಾತಿನ ನವನಗರಕ್ಕೆ ಆಗಮಿಸಿದಾಗ ಪೂರ್ಣವಾಗಿ ಸುಸ್ತಾಗಿದ್ದರು. ಭಾರತವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಳುಗಿದ್ದರೂ ಮಹಾರಾಜರಿಗೆ ಪೊಲೆಂಡ್ ಮಕ್ಕಳನ್ನು ಕಂಡು ಮರುಕ ಉಂಟಾಗಿತ್ತು.
ಅವರು ಜಾಮ್‌ನಗರದಿಂದ 23 ಕಿ.ಮೀ ದೂರದಲ್ಲಿನ ಬಾಲಾಛಡಿಯಲ್ಲಿ ಮಕ್ಕಳ ಶಿಬಿರ ನಿರ್ಮಿಸಿಸಿ ಮಹಾರಾಜರು ಅಲ್ಲಿಯೇ ಎಲ್ಲ ವ್ಯವಸ್ಥೆ ಕಲ್ಪಿಸಿದ್ದರು. ಈ ಬಗ್ಗೆ ಮಹಾರಾಜರ ಪುತ್ರಿ ಹರ್ಷದ್ ಕುಮಾರಿ ನಿಯತಕಾಲಿಕೆಯಲ್ಲಿನ ಸಂದರ್ಶನದಲ್ಲಿ ಸ್ಮರಿಸಿದ್ದಾರೆ. ಇವೆಲ್ಲ ನಡೆದಿದ್ದು 1920 ರಿಂದ 1940 ರಲ್ಲಂತೆ.
ಇದರ ನೆನಪಿಗಾಗಿ ಪೊಲೆಂಡ್‌ನ ವಾರ್ಸಾದಲ್ಲಿನ ಶಾಲೆಯೊಂದಕ್ಕೆ ದಿಗ್ವಿಜಯ್‌ಸಿಂಗ್‌ಜೀ ಮಹಾರಾಜರ ಹೆಸರನ್ನು ಇರಿಸಿ ಈಗಲೂ ಗೌರವ ಸೂಚಿಸಲಾಗುತ್ತಿದೆಯಂತೆ.