ನವಜಾತ ಶಿಶುವಿನ ಶಸ್ತ್ರಚಿಕಿತ್ಸೆಗಾಗಿ ಹಣ ಸಂಗ್ರಹಿಸಲು, ಪೋಲೆಂಡ್‌ನ ಒಲಿಂಪಿಕ್ಸ್ ಕ್ರೀಡಾಪಟು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗೆದ್ದ ಬೆಳ್ಳಿಯ ಪದಕವನ್ನು ಹರಾಜು ಹಾಕಿದ್ದರು. ಪದಕ ಖರೀದಿ ಮಾಡಿದ ವ್ಯಕ್ತಿ, ಪದಕವನ್ನು ಇಟ್ಟುಕೊಳ್ಳಲು ಕ್ರೀಡಾಪಟುವಿಗೆ ನೀಡಿದ್ದಾರೆ.
ಮೂಳೆ ಕ್ಯಾನ್ಸರ್ ನಿಂದ ಚೇತರಿಸಿಕೊಂಡ ನಂತರ, ಈ ವರ್ಷ 25 ವರ್ಷದ ಮರಿಯಾ ಆಂಡ್ರೆಜಿಕ್, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ನವಜಾತ ಶಿಶುವಿನ ಚಿಕಿತ್ಸೆಗೆ ಸಹಾಯ ಮಾಡಲು ತಮ್ಮ ಪದಕವನ್ನು ಹರಾಜಿಗಿಟ್ಟಿದ್ದರು. ಮಿಲೋಸ್ ಮಾಲಿಸ್ಸಾ ಹೆಸರಿನ ನವಜಾತ ಶಿಶುವಿಗೆ, ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಇದಕ್ಕಾಗಿ ಅವರ ಕುಟುಂಬ ಹಣ ಸಂಗ್ರಹಿಸುತ್ತಿದೆ.
BIG NEWS: ಹಿಂದಿ ಬೇಡ, ಕೇಳಿದ ಭಾಷೆಯಲ್ಲಿ ಉತ್ತರ ಕೊಡಿ; ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು
ಆಪರೇಷನ್ ಮಾಡದಿದ್ದರೆ ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಮಿಲೋಜ್ ಪೋಷಕರು ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರು. ಮರಿಯಾ ಪದಕವನ್ನು, 51 ಸಾವಿರ ರೂಪಾಯಿಗೆ ಬಿಡ್ ಮಾಡಲಾಗಿತ್ತು. ಇದನ್ನು ಖರೀದಿಸಿದವರು ಪದಕವನ್ನು ನಿಮ್ಮ ಬಳಿಯೇ ಇಟ್ಟಕೊಳ್ಳಿ ಎಂದು ಮರಿಯಾಗೆ ಹೇಳಿದ್ದಾರೆ.