ಬೆಂಗಳೂರು: ಮೋದಿ ವಿಷದ ಹಾವು ಇದ್ದಂತೆ, ನೆಕ್ಕಿದ್ರೆ ಸತ್ತು ಹೋಗ್ತಾರೆ ಎಂದು ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ತಮ್ಮ ಹೇಳಿಕೆಯಿಂದಾಗಿ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಖರ್ಗೆ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ವಿಷಪೂರಿತ ಹಾವಿನಂತೆ. ಇದು ವಿಷವೋ ಅಲ್ಲವೋ ಎಂದು ನೀವು ಭಾವಿಸಬಹುದು. ನೀವು ಅದನ್ನು ನೆಕ್ಕಿದರೆ ನೀವು ಸಾಯುತ್ತೀರಿ ಎಂದು ಖರ್ಗೆ ಹೇಳಿದ್ದರು. ನಂತರದಲ್ಲಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, ತಮ್ಮ ಹೇಳಿಕೆ ಪ್ರಧಾನಿ ಮೋದಿಯವರ ಕುರಿತಾದುದಲ್ಲ. ಬಿಜೆಪಿಯ ಸಿದ್ಧಾಂತ “ಹಾವಿನಂತೆ” ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಖರ್ಗೆ ಹೇಳಿಕೆ ನೀಡಿದ್ದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಜೆಪಿ -ಕಾಂಗ್ರೆಸ್ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇವೆ. ಆರ್.ಎಸ್.ಎಸ್. -ಬಿಜೆಪಿ ಸಿದ್ಧಾಂತ ವಿಷಕಾರಿಯಾಗಿದೆ ಎಂದು ಖರ್ಗೆ ಹೇಳಿದ್ದಾರೆ.