
ಮೈಸೂರು: ವಿಷಕಾರಿ ಅನಿಲ ಸೋರಿಕೆಯಾಗಿ 50 ಜನರು ಅಸ್ವಸ್ಥರಾಗಿರುವ ಘಟನೆ ಮೈಸೂರು ಜಿಲ್ಲೆಯ ನರಸಿಂಹರಾಜ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗುಜರಿ ಅಂಗಡಿ ಮಾಲೀಕ, ಕಾರ್ಮಿಕನ ಎಡವಟ್ಟಿನಿಂದಾಗಿ ಈ ಅನಾಹುತ ಸಭವಿಸಿದೆ. ಮೈಸೂರಿನ ವರುಣ ನಾಲೆ ಸಮೀಪದಲ್ಲಿರುವ ಗುಜರಿ ಅಂಗಡಿ ಮಾಲಿಕ ಮೂರು ತಿಂಗಳ ಹಿಂದೆ ದಾವಣಗೆರೆಯಿಂದ ಗುಜರಿ ಸಾಮಗ್ರಿಗಳನ್ನು ತಂದಿದ್ದನು. ಇದರಲ್ಲಿ ಖಾಲಿ ಸಿಲಿಂಡರ್ ಗ್ಳು ಕೂಡ ಇದ್ದವು. ಈ ಸಿಲಿಂಡರ್ ಗಳನ್ನು ಕಟ್ ಮಡುವಾಗ ಕರ್ಮಿಕ ಕ್ಲೋರಿನ್ ತುಂಬಿದ್ದ ಸಿಲಿಂಡರ್ ನ್ನು ಕೂಡ ಕಟ್ ಮಾಡಿದ್ದಾನೆ. ಅನಿಲ ಸೋರಿಕೆಯಿಂದಾಗಿ ಕಾರ್ಮಿಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಕೆಲ ಸಮಯದಲ್ಲೇ ಗುಜರಿ ಅಂಗಡಿಯ ಸುತ್ತಮುತ್ತಲ ಪ್ರದೇಶಕ್ಕೂ ವಿಷಾನೀಲ ಹರಡಿದ್ದು, 50 ಜನರು ಅಸ್ವಸ್ಥಗೊಂಡಿದ್ದಾರೆ. ಸಧ್ಯ ಗುಜರಿ ಅಂಗಡಿ ಮಾಲೀಕ ಮೊಹಮ್ಮದ್ ವಿರುದ್ಧ ನರಸಿಂಹರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.