
ಟ್ವಿಟರ್ನಲ್ಲಿ ಸದಾ ಒಂದಿಲ್ಲೊಂದು ವಿಚಾರಗಳ ಬಗ್ಗೆ ತರ್ಕ ಮಾಡುತ್ತಲೇ ಇರೋ ಶಶಿ ತರೂರ್ ಈ ಬಾರಿ ಮಾಡಿದ ಟ್ವೀಟ್ ಮತ್ತೊಮ್ಮೆ ನೆಟ್ಟಿಗರು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಈ ಬಾರಿಯೂ ಹೊಸ ಇಂಗ್ಲೀಷ್ ಶಬ್ದವೊಂದನ್ನ ತರೂರ್ ಬಳಕೆ ಮಾಡಿದ್ದಾರೆ.
ಈ ಟ್ವೀಟ್ ಮೊದಲು ಆರಂಭವಾಗಿದ್ದು ಡಾ. ಪ್ರಿಯಾ ಆನಂದ್ ಎಂಬವರಿಂದ. ಈಕೆ ಶಶಿ ತರೂರ್ರಿಗೆ ಟ್ವಿಟರ್ನಲ್ಲಿ ನಾನು ಹೊಸ ಇಂಗ್ಲೀಷ್ ಶಬ್ದಗಳನ್ನ ಕಲಿಯಲು ಕಾಯುತ್ತಿದ್ದೇನೆ ಎಂದು ಬರೆದಿದ್ದರು. ಶಶಿ ತರೂರ್ ಈ ಟ್ವೀಟ್ಗೆ ಪ್ರತಿಕ್ರಿಯಿಸಿದ್ದು pogonotrophy ಎಂಬ ಹೊಸ ಶಬ್ದವನ್ನ ಪರಿಚಯಿಸಿದ್ದಾರೆ.
ಅರ್ಥಶಾಸ್ತ್ರಜ್ಞರಾಗಿರುವ ನನ್ನ ಸ್ನೇಹಿತ ರತಿನ್ ರಾಯ್ ಎಂಬವರು ನನಗೆ ಇಂದು ಹೊಸ ಶಬ್ದವನ್ನ ಕಲಿಸಿದ್ರು. pogonotrophy ಎಂಬ ಹೊಸ ಶಬ್ದವನ್ನ ನಾನು ಕಲಿತೆ. ಇದು ಗಡ್ಡ, ಮೀಸೆಯನ್ನ ಅಲಂಕಾರಗೊಳಿಸುವ ಕಲೆ ಎಂಬರ್ಥವನ್ನ ಹೊಂದಿದೆ ಎಂದು ಹೇಳಿದ್ದಾರೆ.
ಈ ಪದಕ್ಕೆ ಇನ್ನಷ್ಟು ಅರ್ಥವನ್ನ ವಿವರಿಸಲು ಶಶಿ ತರೂರ್ ಪ್ರಧಾನಿ ಮೋದಿಯವರ ಗಡ್ಡವನ್ನ ಉದಾಹರಣೆಯಾಗಿ ತೆಗೆದುಕೊಂಡ್ರು. ಫ್ರಧಾನಿಯ pogonotrophy ಸಾಂಕ್ರಾಮಿಕದ ಮುನ್ಸೂಚನೆಯಾಗಿದೆ ಎಂದು ಟ್ವಿಟರ್ನಲ್ಲಿ ಬರೆದಿದ್ದಾರೆ. ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.