ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್, ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೆಪ್ಟೆಂಬರ್ 1 ರಿಂದ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಬದಲಾಯಿಸಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮುಂದಿನ ತಿಂಗಳಿನಿಂದ ಉಳಿತಾಯ ಖಾತೆ ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲಿದೆ. ಪಿಎನ್‌ಬಿಯ ಅಧಿಕೃತ ವೆಬ್‌ಸೈಟ್ ನೀಡಿದ ಮಾಹಿತಿಯ ಪ್ರಕಾರ, ಬ್ಯಾಂಕಿನ ಹೊಸ ಬಡ್ಡಿದರವು ವರ್ಷಕ್ಕೆ ಶೇಕಡಾ 2.90 ರಷ್ಟಾಗಿರಲಿದೆ. ಇದು ಪ್ರಸ್ತುತ ವರ್ಷಕ್ಕೆ ಶೇಕಡಾ 3ರಷ್ಟಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕಾರ, ಹೊಸ ಬಡ್ಡಿದರಗಳು ಬ್ಯಾಂಕಿನ ಅಸ್ತಿತ್ವದಲ್ಲಿರುವ ಖಾತೆದಾರರು ಮತ್ತು ಹೊಸ ಖಾತೆದಾರರಿಗೆ ಅನ್ವಯವಾಗಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನು, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲಾಗಿದೆ. ಕಳೆದ ವರ್ಷವಷ್ಟೇ ಈ ಎರಡು ಬ್ಯಾಂಕುಗಳು ಪಂಜಾಬ್ ನ್ಯಾಷನಲ್ ಬ್ಯಾಂಕಿನೊಂದಿಗೆ ವಿಲೀನಗೊಂಡಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆಯ ಬಡ್ಡಿ ವಾರ್ಷಿಕವಾಗಿ ಶೇಕಡಾ 2.70ರಷ್ಟಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಉಳಿತಾಯ ಖಾತೆಯ ಬಡ್ಡಿ ದರವು ವರ್ಷಕ್ಕೆ ಶೇಕಡಾ 4-6ರಷ್ಟಿದೆ.