ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಉಡುಗೊರೆ ನೀಡಿದೆ. ಚಿಲ್ಲರೆ ಉತ್ಪನ್ನಗಳ ಮೇಲಿನ ಎಲ್ಲಾ ಸೇವಾ ಶುಲ್ಕ ಮತ್ತು ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಕಾರು ಹಾಗೂ ಗೃಹ ಸಾಲ ಪಡೆಯುವವರು ಇದ್ರ ಲಾಭ ಪಡೆಯಲಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್, ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದೆ. ಬ್ಯಾಂಕ್ ತನ್ನ ಎಲ್ಲಾ ಪ್ರಮುಖ ಚಿಲ್ಲರೆ ಉತ್ಪನ್ನಗಳಾದ, ಗೃಹ ಸಾಲ, ವಾಹನ ಸಾಲ, ಆಸ್ತಿ ಸಾಲ, ಪಿಂಚಣಿ ಮತ್ತು ಚಿನ್ನದ ಸಾಲದ ಮೇಲಿನ ಎಲ್ಲಾ ಸೇವಾ ಶುಲ್ಕಗಳು ಮತ್ತು ಸಂಸ್ಕರಣಾ ಶುಲ್ಕಗಳನ್ನು ಮನ್ನಾ ಮಾಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಗ ಗೃಹ ಸಾಲದ ಮೇಲೆ ಶೇಕಡಾ 6.8 ಬಡ್ಡಿ ವಿಧಿಸುತ್ತದೆ. ಕಾರಿನ ಸಾಲದ ಮೇಲೆ ಶೇಕಡಾ 7.15 ಬಡ್ಡಿ ವಿಧಿಸುತ್ತದೆ. ಬ್ಯಾಂಕ್ ಶೇಕಡಾ 8.95ರ ಬಡ್ಡಿದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಸೇವೆಯನ್ನು ಬ್ಯಾಂಕ್ ನ ಯಾವುದೇ ಶಾಖೆ ಅಥವಾ ಆನ್ಲೈನ್ ಮೂಲಕ ಡಿಸೆಂಬರ್ 31,2021ರವರೆಗೆ ಪಡೆಯಬಹುದಾಗಿದೆ.