ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನೇಮಕಾತಿ ಕೈಗೊಳ್ಳಲಾಗಿದೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್(PNB) ಸ್ಪೆಷಲಿಸ್ಟ್ ಆಫೀಸರ್ಸ್(SO) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಭಿಯಾನದ ಮೂಲಕ ಸಂಸ್ಥೆಯಲ್ಲಿ ಒಟ್ಟು 145 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸಲು ಮೇ 7, 2022 ರವರೆಗೆ ಕೊನೆಯ ದಿನಾಂಕವಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕ್ ನ ಅಧಿಕೃತ ವೆಬ್ಸೈಟ್ www.pnbindia.in ಮೂಲಕ ಅರ್ಜಿ ಸಲ್ಲಿಸಬಹುದು.
ಆನ್ ಲೈನ್ ನೋಂದಣಿಗೆ ಕೊನೆಯ ದಿನಾಂಕ: ಮೇ 7
ಆನ್ ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ: ಜೂನ್ 12
ಖಾಲಿ ಹುದ್ದೆಗಳ ಸಂಖ್ಯೆ
ಒಟ್ಟು: 145 ಪೋಸ್ಟ್ ಗಳು
ಮ್ಯಾನೇಜರ್: 40 ಪೋಸ್ಟ್ ಗಳು
ಮ್ಯಾನೇಜರ್(ಕ್ರೆಡಿಟ್): 100 ಪೋಸ್ಟ್ ಗಳು
ಸೀನಿಯರ್ ಮ್ಯಾನೇಜರ್(ಖಜಾನೆ): 5 ಹುದ್ದೆಗಳು