ಗೃಹ ಸಾಲ ಪಡೆಯುವವರಿಗೆ ಖುಷಿ ಸುದ್ದಿಯೊಂದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಂಸಿಎಲ್ಆರ್ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಪಿಎನ್‌ಬಿ 1 ವರ್ಷದ ಎಂಸಿಎಲ್‌ಆರ್ ಅನ್ನು ಶೇಕಡಾ 0.05 ರಷ್ಟು ಇಳಿಕೆ ಮಾಡಿ 7.30 ಕ್ಕೆ ತಂದಿದೆ. ಹೊಸ ದರಗಳು ಈಗಾಗಲೇ ಜಾರಿಗೆ ಬಂದಿವೆ.
6 ತಿಂಗಳು ಮತ್ತು 3 ತಿಂಗಳ ಅವಧಿಯ ಎಂಸಿಎಲ್ಆರ್ ಶೇಕಡಾ 0.10 ರಷ್ಟು ಕಡಿತಗೊಳಿಸಲಾಗಿದೆ. 6 ತಿಂಗಳ ಎಂಸಿಎಲ್ಆರ್ ಈಗ ಶೇಕಡಾ 7ರಷ್ಟಾಗಿದೆ. 3 ತಿಂಗಳ ಎಂಸಿಎಲ್ಆರ್ ಈಗ ಶೇಕಡಾ 6.8 ಆಗಿದೆ. ಓವರ್ ನೈಟ್, ಒಂದು ತಿಂಗಳು ಹಾಗೂ ಮೂರು ವರ್ಷದ ಎಂಸಿಎಲ್ ಆರ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐನ ಎಂಸಿಎಲ್‌ಆರ್ ಶೇಕಡಾ 6.65 ರಿಂದ ಶೇಕಡಾ 7.30 ರಷ್ಟಿದೆ. ಗೃಹ ಸಾಲ ಮತ್ತು ಇತರ ಸಾಲಗಳಿಗೆ ಎಸ್‌ಬಿಐ ಪ್ರತಿ ತಿಂಗಳು ಎಂಸಿಎಲ್‌ಆರ್ ದರವನ್ನು ಪರಿಷ್ಕರಿಸುತ್ತದೆ. 1 ವರ್ಷ ಅವಧಿಯ ಎಸ್‌ಬಿಐನ ಎಂಸಿಎಲ್‌ಆರ್ ಶೇಕಡಾ 7 ರಷ್ಟಿದ್ದು, ಪಿಎನ್‌ಬಿಗಿಂತ ಶೇಕಡಾ 0.3 ರಷ್ಟು ಅಗ್ಗವಾಗಿದೆ.