ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ 20 ಲಕ್ಷ ರೂಪಾಯಿಗಳ ಸಂಪೂರ್ಣ ಲಾಭವನ್ನು ಉಚಿತವಾಗಿ ನೀಡಲಿದೆ. ಉದ್ಯೋಗದಲ್ಲಿದ್ದು, ಖಾತೆಯನ್ನು ತೆರೆಯಲು ಯೋಚಿಸುತ್ತಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆ ತೆರೆಯುವ ಮೂಲಕ ಈ ವಿಶೇಷ ಕೊಡುಗೆಯ ಲಾಭವನ್ನು ಪಡೆಯಬಹುದು. ಇದಕ್ಕಾಗಿ ಬ್ಯಾಂಕಿನಲ್ಲಿ ಪಿ ಎನ್ ಬಿ ಮೈ ಸ್ಯಾಲರಿ ಖಾತೆಯನ್ನು ತೆರೆಯಬೇಕು.
PNB MySalary ಖಾತೆ ಮೂಲಕ ನಿಮ್ಮ ಸಂಬಳವನ್ನು ಉಳಿಸಬಹುದು. ಈ ಯೋಜನೆಯಡಿ ಯಾರಿಗಾದರೂ ವೈಯಕ್ತಿಕ ಅಪಘಾತ ಸಂಭವಿಸಿದಲ್ಲಿ, ವಿಮೆಯ ಜೊತೆಗೆ ಓವರ್ಡ್ರಾಫ್ಟ್ ಮತ್ತು ಸ್ವೀಪ್ ಸೌಲಭ್ಯದ ಪ್ರಯೋಜನ ಪಡೆಯಬಹುದು.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಂಬಳ ಖಾತೆದಾರರಿಗೆ ವಿಮಾ ರಕ್ಷಣೆ ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಶೂನ್ಯ ಬ್ಯಾಲೆನ್ಸ್ ಮತ್ತು ಶೂನ್ಯ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ್ ಸೌಲಭ್ಯದೊಂದಿಗೆ ಪಿಎನ್ಬಿ ಮೈ ಸ್ಯಾಲರಿ ಖಾತೆಯನ್ನು ತೆರೆಯುವಾಗ, 20 ಲಕ್ಷ ರೂಪಾಯಿಗಳ ವೈಯಕ್ತಿಕ ಅಪಘಾತ ರಕ್ಷಣೆಯನ್ನು ನೀಡಲಾಗುತ್ತಿದೆ.
ಈ ಖಾತೆಯು 4 ವಿಭಾಗ ಹೊಂದಿದೆ.
- ‘ಸಿಲ್ವರ್’ ವರ್ಗ- ಇದರಲ್ಲಿ 10 ಸಾವಿರದಿಂದ 25 ಸಾವಿರದವರೆಗಿನ ಮಾಸಿಕ ವೇತನ ಇರುವವರು ಖಾತೆ ತೆರೆಯಬಹುದು.
- ‘ಗೋಲ್ಡ್’ ವರ್ಗ- ಈ ವರ್ಗದಲ್ಲಿ 25001 ರಿಂದ 75000 ರೂಪಾಯಿವರೆಗೆ ಮಾಸಿಕ ವೇತನ ಹೊಂದಿರುವವರು ಖಾತೆ ತೆರೆಯಬಹುದು.
- ‘ಪ್ರೀಮಿಯಂ’ ವರ್ಗ- ಇದರಲ್ಲಿ 75001 ರೂಪಾಯಿಯಿಂದ 150000 ರೂಪಾಯಿವರೆಗಿನ ಮಾಸಿಕ ವೇತನ ಹೊಂದಿರುವವರು ಖಾತೆ ತೆರೆಯಬಹುದು.
- ‘ಪ್ಲಾಟಿನಂ’ ವರ್ಗ – ಈ ವರ್ಗದಲ್ಲಿ 150001 ರೂಪಾಯಿಗಿಂತ ಹೆಚ್ಚು ಮಾಸಿಕ ವೇತನ ಹೊಂದಿರುವವರು ಇದ್ರಲ್ಲಿ ಖಾತೆ ತೆರೆಯಬಹುದು.
ಬ್ಯಾಂಕ್ನಿಂದ ಗ್ರಾಹಕರಿಗೆ ಓವರ್ಡ್ರಾಫ್ಟ್ ಸೌಲಭ್ಯವನ್ನು ನೀಡಲಾಗುತ್ತದೆ. ಸಿಲ್ವರ್ ವರ್ಗದಲ್ಲಿರುವವರು 50,000 ರೂಪಾಯಿವರೆಗೆ ಓವರ್ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ. ಗೋಲ್ಡ್ ಖಾತೆ ಹೊಂದಿರುವವರು 150000 ರೂಪಾಯಿವರೆಗೆ ಓವರ್ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ. ಪ್ರೀಮಿಯಂ ಜನರು 225000 ರೂಪಾಯಿವರೆಗೆ ಓವರ್ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ. ಪ್ಲಾಟಿನಂ ಜನರು 300000 ರೂಪಾಯಿವರೆಗೆ ಓವರ್ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ.