
ಈ ಯೋಜನೆಯಡಿಯಲ್ಲಿನ ನಿಯಮ ಮತ್ತು ಷರತ್ತುಗಳ ಪ್ರಕಾರ ಪಿಂಚಣಿಯ ಖಾತರಿ ದರಗಳನ್ನು ಪ್ರತಿ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯವು ಪರಿಶೀಲಿಸಿ ನಿರ್ಧರಿಸುತ್ತದೆ. ಭಾರತೀಯ ಜೀವ ವಿಮಾ ನಿಗಮವು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಅಧಿಕಾರ ಹೊಂದಿದೆ.
2022-23 ಹಣಕಾಸು ವರ್ಷಕ್ಕೆ ಯೋಜನೆಯು ಮಾಸಿಕವಾಗಿ ಪಾವತಿಸಬಹುದಾದ ಶೇ.7.40 ರ ಬಡ್ಡಿದರದಂತೆ ಖಚಿತ ಪಿಂಚಣಿಯನ್ನು ಒದಗಿಸುತ್ತದೆ. ಈ ಖಚಿತವಾದ ಪಿಂಚಣಿ ದರವು 31 ನೇ ಮಾರ್ಚ್, 2023 ರವರೆಗೆ ಖರೀದಿಸಿದ ಎಲ್ಲಾ ಪಾಲಿಸಿಗಳಿಗೆ 10 ವರ್ಷಗಳ ಪೂರ್ಣ ಪಾಲಿಸಿ ಅವಧಿಗೆ ಅನ್ವಯವಾಗಲಿದೆ.
ಈ ಯೋಜನೆಯನ್ನು ಆಫ್‌ಲೈನ್‌ನಲ್ಲಿ ಮತ್ತು ಆನ್‌ಲೈನ್‌ನಲ್ಲಿ ಖರೀದಿಸಬಹುದು. ಈ ಯೋಜನೆಯನ್ನು ಆನ್‌ಲೈನ್‌ನಲ್ಲಿ ಖರೀದಿಸಲು ವೆಬ್‌ಸೈಟ್ www.licindia.in ಗೆ ಲಾಗ್ ಇನ್ ಮಾಡಬೇಕು.
ಪ್ರಯೋಜನಗಳು
-ಈ ಯೋಜನೆಯಲ್ಲಿ ಯಾವುದೇ ತೆರಿಗೆ ವಿನಾಯಿತಿ ಇರುವುದಿಲ್ಲ, ಇದು ಕೇವಲ ಹೂಡಿಕೆ ಯೋಜನೆಯಾಗಿದೆ.
-60 ವರ್ಷ ಮೇಲ್ಪಟ್ಟವರು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಇದಕ್ಕಾಗಿ 31 ಮಾರ್ಚ್ 2023 ರ ಮೊದಲು ಅರ್ಜಿ ಸಲ್ಲಿಸಬೇಕು.
– ಈ ಯೋಜನೆಯಲ್ಲಿ ಜಿಎಸ್‌ಟಿಯಲ್ಲಿ ರಿಯಾಯಿತಿ ಇದೆ.
-ಹೂಡಿಕೆಗೆ ಅನುಗುಣವಾಗಿ ತಿಂಗಳಿಗೆ 1,000 ರೂ.ನಿಂದ 9,250 ರೂ.ವರೆಗೆ ಪಿಂಚಣಿ ಪಡೆಯಬಹುದು.
ಅರ್ಹತಾ ಷರತ್ತುಗಳು ಮತ್ತು ಇತರ ನಿರ್ಬಂಧಗಳು
ಎ) ಕನಿಷ್ಠ ವಯಸ್ಸು 60 ವರ್ಷ ಪೂರ್ಣಗೊಂಡಿರಬೇಕು.
ಬಿ) ಗರಿಷ್ಠ ವಯಸ್ಸು ಯಾವುದೇ ಮಿತಿಯಿಲ್ಲ.
ಸಿ) ಪಾಲಿಸಿ ಅವಧಿ 10 ವರ್ಷಗಳು.
ಡಿ) ಕನಿಷ್ಠ ಪಿಂಚಣಿ : ತಿಂಗಳಿಗೆ 1,000 ರೂ., ಪ್ರತಿ ತ್ರೈಮಾಸಿಕಕ್ಕೆ 3,000 ರೂ., ಅರ್ಧ ವರ್ಷಕ್ಕೆ 6,000 ರೂ., ವರ್ಷಕ್ಕೆ 12,000 ರೂ.
ಇ) ಗರಿಷ್ಠ ಪಿಂಚಣಿ : ತಿಂಗಳಿಗೆ 9,250 ರೂ., ಪ್ರತಿ ತ್ರೈಮಾಸಿಕಕ್ಕೆ 27,750 ರೂ., ಅರ್ಧ ವರ್ಷಕ್ಕೆ 55,500 ರೂ., ವರ್ಷಕ್ಕೆ 1,11,000 ರೂ.