alex Certify ಗಮನಿಸಿ: ವರ್ಷಕ್ಕೆ ಕೇವಲ 12 ರೂ. ಪಾವತಿಸಿ ಜೀವ ವಿಮೆ ಪಡೆಯುವ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ವರ್ಷಕ್ಕೆ ಕೇವಲ 12 ರೂ. ಪಾವತಿಸಿ ಜೀವ ವಿಮೆ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ವಿಮೆ ಯೋಜನೆಯನ್ನು ಮಾಡಿಸುವುದು ಅಂದರೆ ಸುಲಭವಾದ ವಿಚಾರವಲ್ಲ. ನೀವು ಕೂಡಿಟ್ಟ ಹಣವನ್ನು ಇಲ್ಲಿ ಹೂಡಿಕೆ ಮಾಡುವ ಮುನ್ನ ಈ ವಿಮಾ ಯೋಜನೆಯು ಎಷ್ಟು ಪ್ರಯೋಜನಕಾರಿ ಎಂಬುದನ್ನು ನೀವು ಪರಾಮರ್ಶಿಸಬೇಕಾಗುತ್ತದೆ. ಅಪಘಾತವಾದ ಸಂದರ್ಭದಲ್ಲಿ ವಿಮಾ ಯೋಜನೆಗಳು ಬಹಳ ಉಪಯುಕ್ತ ಎನಿಸುತ್ತವೆ. ಖಾಸಗಿ ಕಂಪನಿಗಳಲ್ಲಿ ಪ್ರೀಮಿಯಂ ದರ ಹೆಚ್ಚಿರುತ್ತದೆ. ಹೀಗಾಗಿ ವಿಮಾ ಯೋಜನೆಯನ್ನು ಪಡೆಯುವುದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ.

ಆದರೆ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯು ಅತ್ಯಂತ ಕಡಿಮೆ ದರದಲ್ಲಿ ದೇಶದ ಜನತೆಗೆ ಬಹಳ ಉಪಯುಕ್ತವಾಗಿದೆ. ನೀವು ವಾರ್ಷಿಕವಾಗಿ ಕೇವಲ 12 ರೂಪಾಯಿ ವ್ಯಯಿಸಿ ಈ ಅಪಘಾತ ವಿಮೆಯನ್ನು ಹೊಂದಬಹುದಾಗಿದೆ.

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಆಗಿನ ಹಣಕಾಸು ಸಚಿವ ಅರುಣ್​ ಜೆಟ್ಲಿ 2015-16ನೇ ಸಾಲಿನ ವಾರ್ಷಿಕ ಬಜೆಟ್​ನಲ್ಲಿ ಫೆಬ್ರವರಿ 28, 2015ರಲ್ಲಿ ಘೋಷಣೆ ಮಾಡಿದರು. ಜೀವ ವಿಮೆಯನ್ನು ಹೊಂದಿರದ ದೇಶದ ದೊಡ್ಡ ಪಾಲು ಜನತೆಗೆ ಜೀವ ವಿಮೆಯನ್ನು ಒದಗಿಸುವುದೇ ಈ ಯೋಜನೆಯ ಉದ್ದೇಶ ಆಗಿದೆ. ಈ ವಿಮಾ ಯೋಜನೆಯ ಅಡಿಯಲ್ಲಿ ಅಪಘಾತ ವಿಮೆಯನ್ನು ವಾರ್ಷಿಕ 12 ರೂಪಾಯಿ ಪ್ರೀಮಿಯಂನಲ್ಲಿ ಮಾಡಬಹುದಾಗಿದೆ.

ಈ ಯೋಜನೆಯ ಅಡಿಯಲ್ಲಿ ವಿಮೆ ಹೊಂದಿರುವ ವ್ಯಕ್ತಿಯು ಮರಣ ಹೊಂದಿದರೆ ಅಥವಾ ಅಪಘಾತದಲ್ಲಿ ತನ್ನ ಎರಡು ಕಣ್ಣು, ಕೈಗಳು ಅಥವಾ ಕಾಲುಗಳು ಹಾನಿಗೊಳಗಾದರೆ ಅವರು 2 ಲಕ್ಷ ರೂಪಾಯಿಯನ್ನು ರಕ್ಷಣಾ ವಿಮೆಯ ರೂಪದಲ್ಲಿ ಪಡೆಯಬಹುದಾಗಿದೆ. ಆ್ಯಕ್ಸಿಡೆಂಟಲ್​ ಕವರೇಜ್​​ ಮೂಲಕ ಮರಣ ಹಾಗೂ ಸಂಪೂರ್ಣ ಅಂಗವೈಕಲ್ಯ ಸಂದರ್ಭದಲ್ಲಿ 2 ಲಕ್ಷ ರೂಪಾಯಿ ಹಾಗೂ ಭಾಗಶಃ ಅಂಗವೈಕಲ್ಯ ಸಂದರ್ಭದಲ್ಲಿ 1 ಲಕ್ಷ ರೂಪಾಯಿ ವಿಮಾ ಮೊತ್ತವನ್ನು ಪಡೆಯಲಿದ್ದಾರೆ.

ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?

18 ರಿಂದ 70 ವರ್ಷ ಪ್ರಾಯದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಧಾನಮಂತ್ರಿ ಬಿಮಾ ಸುರಕ್ಷಾ ಯೋಜನೆ ಆರಂಭಿಸುವವರು ವಾರ್ಷಿಕ 12 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಪ್ರಧಾನಮಂತ್ರಿ ಬಿಮಾ ಸುರಕ್ಷಾ ಯೋಜನೆಯು 1 ವರ್ಷಕ್ಕೆ ಮಾನ್ಯವಾಗಿರುತ್ತದೆ. ಇದನ್ನು ಪ್ರತಿ ಒಂದು ವರ್ಷಕ್ಕೆ ನವೀಕರಿಸಬೇಕು.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಷರತ್ತುಗಳು:

18 ರಿಂದ 70 ವರ್ಷ ಒಳಗಿನವರಿಗೆ ಮಾತ್ರ ಈ ಯೋಜನೆಯಿಂದ ಲಾಭ

ಯೋಜನೆ ಮಾಡುವವರು ಆಧಾರ್​ ಕಾರ್ಡ್ ಹೊಂದಿರುವುದು ಕಡ್ಡಾಯ

ಚಂದಾದಾರರು 1 ಅಥವಾ ಹೆಚ್ಚಿನ ಉಳಿತಾಯ ಖಾತೆಗಳನ್ನು ಹೊಂದಿದ್ರೆ, ಯಾವುದಾದರೂ ಒಂದು ಉಳಿತಾಯ ಖಾತೆಯ ಮೂಲಕ ಯೋಜನೆಗೆ ಸೇರ್ಪಡೆಯಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...