
ಬಹು ನಿರೀಕ್ಷಿತ 5ಜಿ ಬಳಕೆ ಯಾವಾಗ ಎಂಬ ದೇಶವಾಸಿಗಳ ಪ್ರಶ್ನೆಗೆ ಸಣ್ಣ ಸುಳಿವು ಸಿಕ್ಕಿದೆ. ದೂರಸಂಪರ್ಕ ಇಲಾಖೆಯು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ಪತ್ರ ಬರೆದು, 5ಜಿ ಹರಾಜಿಗಾಗಿ ಸ್ಪೆಕ್ಟ್ರಮ್‌ನ ಮೀಸಲು ಬೆಲೆಯ ಶಿಫಾರಸುಗಳನ್ನು ಮಾರ್ಚ್‌ಗೆ ಮೊದಲು ಸಲ್ಲಿಸಲು ವಿನಂತಿಸಿದೆ.
ಆಗಸ್ಟ್ 15ರೊಳಗೆ 5ಜಿ ಸೇವೆ ಆರಂಭವಾಗಬೇಕೆಂದು ಪ್ರಧಾನ ಮಂತ್ರಿ ಕಚೇರಿ ಇಚ್ಛೆ ವ್ಯಕ್ತಪಡಿಸಿದ್ದು, ಈ ಕಾರಣಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಮುಂಬರುವ ಹರಾಜಿನಲ್ಲಿ ಅಳವಡಿಸಿಕೊಳ್ಳಬಹುದಾದ 800 MHz, 900 MHz ಮತ್ತು 1800 MHz ಬ್ಯಾಂಡ್‌ಗಳಲ್ಲಿ ಹೆಚ್ಚುವರಿ ಸ್ಪೆಕ್ಟ್ರಮ್ ಲಭ್ಯತೆಯ ಬಗ್ಗೆ ದೂರ ಸಂಪರ್ಕ ಇಲಾಖೆಯು ಟ್ರಾಯ್‌ಗೆ ಮಾಹಿತಿ ನೀಡಿದೆ.
BIG NEWS: ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ 91 ವಿದ್ಯಾರ್ಥಿಗಳು; ಇಲ್ಲಿದೆ ಮಾಹಿತಿ
5ಜಿ ಸೇವೆಗಳನ್ನು ಪ್ರಾರಂಭಿಸಲು ಆಗಸ್ಟ್ 15 ರ ಅನೌಪಚಾರಿಕ ಗಡುವನ್ನು ನಿಗದಿಪಡಿಸಿರುವುದರಿಂದ, ಪ್ರಕ್ರಿಯೆ ಚುರುಕುಗೊಳಿಸಲು ಸಂದೇಶ ಕಳಿಸಲಾಗಿದೆ.
5ಜಿ ಬಳಕೆ ಬಗ್ಗೆ ಪ್ರಸ್ತುತ ಪ್ರಯೋಗ ನಡೆಯುತ್ತಿರುವ ಸ್ಥಳಗಳಲ್ಲಿ ಆಗಸ್ಟ್‌ನಲ್ಲಿ ಸೀಮಿತವಾಗಿ ಬಳಕೆ ಆರಂಭಿಸುವ ಸಾಧ್ಯತೆಯ ಕುರಿತು ದೂರ ಸಂಪರ್ಕ ಇಲಾಖೆಯುವ ಈ ಕ್ಷೇತ್ರದ ಉದ್ಯಮದೊಂದಿಗೆ ನಿಯಮಿತ ಚರ್ಚೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಟೆಲಿಕಾಂ ಆಪರೇಟರ್‌ಗಳಿಗೆ ಸ್ಪಷ್ಟತೆಯ ಅಗತ್ಯವಿದೆ, ಇದರಿಂದ ಅವರು ಉಪಕರಣಗಳಿಗೆ ಮುಂಚಿತವಾಗಿ ಆರ್ಡರ್ ಮಾಡಬಹುದು. ಎಲ್ಲಾ ಆಪರೇಟರ್‌ಗಳ ನೆಟ್‌ವರ್ಕ್‌ಗಳನ್ನು ಕೆಲವು ತಿಂಗಳುಗಳಲ್ಲಿ 5ಜಿ ಗಾಗಿ ಸೇವೆ-ಸಿದ್ಧಗೊಳಿಸಬಹುದು.
ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಪ್ರಸ್ತುತ ಹಿಂದುಳಿದಿರುವ ಕಾರಣ ಪ್ರಧಾನಿ ಕಚೇರಿ 5ಜಿ ಸೇವೆಗಳನ್ನು ಆಗಸ್ಟ್ ಒಳಗೆ ಆರಂಭಿಸಲು ಒತ್ತಾಯಿಸುತ್ತಿದೆ ಎನ್ನಲಾಗಿದೆ.
ಯುಎಸ್, ಚೀನಾ, ದಕ್ಷಿಣ ಕೊರಿಯಾ ಮತ್ತು ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳು ಈಗಾಗಲೇ 5ಜಿ ಸೇವೆಗಳನ್ನು ಪ್ರಾರಂಭಿಸಿವೆ, ಭಾರತವು ಸದ್ಯ ಪೂರ್ವಸಿದ್ಧತಾ ಹಂತದಲ್ಲಿದೆ.