ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ದೆಹಲಿಯ ಏಮ್ಸ್ ನಲ್ಲಿ ಕೊರೋನಾ ಲಸಿಕೆ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.
ವೈರಸ್ ತಡೆಗಟ್ಟಲು ಲಸಿಕೆ ಪಡೆದುಕೊಳ್ಳುವಂತೆ ಅರ್ಹರಿಗೆ ತಿಳಿಸಿದ್ದಾರೆ. ಇಂದು ನಾನು ದೆಹಲಿಯ ಏಮ್ಸ್ ನಲ್ಲಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದೇನೆ. ಸೋಂಕು ತಡೆಗೆ ಇರುವ ಕೆಲವು ವಿಧಾನಗಳಲ್ಲಿ ವ್ಯಾಕ್ಸಿನೇಷನ್ ಕೂಡ ಸೇರಿದೆ. ನೀವು ಲಸಿಕೆಗೆ ಅರ್ಹರಾಗಿದ್ದರೆ ಶೀಘ್ರದಲ್ಲೇ ಪಡೆದುಕೊಳ್ಳಿ ಎಂದು ಮೋದಿ ಹೇಳಿದ್ದಾರೆ.
ಅಂದ ಹಾಗೇ, ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆಯನ್ನು ಮೋದಿಪಡೆದುಕೊಂಡಿದ್ದಾರೆ.
ಪ್ರಧಾನಿಯವರಿಗೆ ಲಸಿಕೆ ನೀಡಿದ ಇಬ್ಬರು ದಾದಿಯಲ್ಲಿ ಒಬ್ಬರು ಪುದುಚೇರಿಯ ಪಿ. ನಿವೇದಾ ಮತ್ತು ಪಂಜಾಬ್ ನ ನಿಶಾ ಶರ್ಮಾ ಅವರಾಗಿದ್ದಾರೆ. ಮಾರ್ಚ್ 1 ರಂದು ಮೋದಿ ಮೊದಲ ಡೋಸ್ ಪಡೆದುಕೊಂಡಿದ್ದರು.