ಕಾರ್ಮಿಕರಿಗೆಂದು ಪಿಂಚಣಿ ಯೋಜನೆಯನ್ನು ಆರಂಭಿಸಿರುವ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನಧನ ಯೋಜನೆ ಅನೌಪಚಾರಿಕ ಕ್ಷೇತ್ರದ ಕಾರ್ಮಿಕರ ಪಾಲಿಗೆ ಉತ್ತಮ ಸ್ಕೀಂ ಆಗಿದೆ.
ಬೀದಿ ಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ನಿರ್ಮಾಣ ಕಾರ್ಯಕರ್ತರು ಸೇರಿದಂತೆ ಅನೌಪಚಾರಿಕ ಕ್ಷೇತ್ರದಲ್ಲಿ ದುಡಿಯುವ ಜೀವಗಳ ಭವಿಷ್ಯಕ್ಕೆ ನೆರವಾಗಲಿದೆ ಈ ಯೋಜನೆ.
ದಿನವೊಂದಕ್ಕೆ ಬರೀ 2 ರೂ. ಉಳಿತಾಯ ಮಾಡುವ ಮೂಲಕ ವಾರ್ಷಿಕ 36,000 ರೂ.ಗಳ ಪಿಂಚಣಿ ಪಡೆಯಲು ಈ ಯೋಜನೆ ನಿಮಗೆ ನೆರವಾಗಲಿದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು 55 ರೂ.ಗಳ ಹೂಡಿಕೆ ಮಾಡಬೇಕು.
ಉದಾಹರಣೆಗೆ ನೀವು ನಿಮ್ಮ 18ನೇ ವಯಸ್ಸಿನಿಂದಲೂ ಪ್ರತಿನಿತ್ಯ 2 ರೂ. ಹೂಡಿಕೆ ಮಾಡುತ್ತಾ ಹೋದಲ್ಲಿ, ನಿವೃತ್ತರಾಗುವ ವರ್ಷದಲ್ಲಿ ಪ್ರತಿ ವರ್ಷ 36,000 ರೂ.ಗಳ ಪಿಂಚಣಿಗೆ ಅರ್ಹರಾಗಿರುತ್ತೀರಿ. ಒಂದು ವೇಳೆ ವ್ಯಕ್ತಿಯೊಬ್ಬರು ತಮ್ಮ 40ನೇ ವಯಸ್ಸಿನಲ್ಲಿ ಈ ಹೂಡಿಕೆ ಆರಂಭಿಸಿದರೆ ಮಾಸಿಕ 200 ರೂ.ಗಳನ್ನು ಪಾವತಿ ಮಾಡಬೇಕಾಗುತ್ತದೆ. 60 ವರ್ಷಗಳ ವಯಸ್ಸಾದ ಬಳಿಕ ನೀವು ಪಿಂಚಣಿ ಪಡೆಯಲು ಅರ್ಹರಾಗಿರುತ್ತೀರಿ. 60 ವರ್ಷ ವಯಸ್ಸಾದ ಮೇಲೆ ಮಾಸಿಕ 3,000 ರೂ.ಗಳು ಅಥವಾ ವಾರ್ಷಿಕ 36,000 ರೂ.ಗಳನ್ನು ಪಿಂಚಣಿಯಾಗಿ ಪಡೆಯಲಿದ್ದೀರಿ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಒಂದೇ ದಿನದಲ್ಲಿ 267 ಜನ ಬಲಿ
ಈ ಯೋಜನೆಗೆ ಚಂದಾದಾರರಾಗಲು ನಿಮ್ಮಲ್ಲಿ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಇರಬೇಕು. ಈ ಯೋಜನೆ ಸೇರಬಯಸುವ ವ್ಯಕ್ತಿಯ ವಯಸ್ಸು 18-40 ವರ್ಷವಾಗಿರಬೇಕು. ಜನ್‌ಧನ್ ಪಾಸ್‌ಬುಕ್ ಹಾಗೂ ಮೊಬೈಲ್ ಸಂಖ್ಯೆಯನ್ನು ಸಹ ಹೊಂದಿರಬೇಕು.
ಸಾಮಾನ್ಯ ಸೇವಾ ಕೇಂದ್ರದ ಮೂಲಕ ಈ ಯೋಜನೆಗೆ ನಿಮ್ಮನ್ನು ನೀವು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಯೋಜನೆಗೆಂದೇ ಸರ್ಕಾರವು ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಿದೆ.
ಮೇಲ್ಕಂಡ ಯೋಜನೆ ಕುರಿತು ಹೆಚ್ಚಿನ ವಿವರಗಳನ್ನು ಕೊಡಲು ಸುಂಕರಹಿತ ಹಾಟ್‌ಲೈನ್ ಒಂದನ್ನು ಸ್ಥಾಪಿಸಲಾಗಿದೆ — 18002676888.