ನಾಗ್ಪುರ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಪ್ರಧಾನಿ ಮೋದಿ ಅವರನ್ನು ಸಾಂಪ್ರದಾಯಿಕವಾಗಿ ಡೋಲು ಬಡಿದು ಸ್ವಾಗತಿಸಿದ್ದು ಸಂಭ್ರಮ ಜೋರಾಗಿತ್ತು.
ಪ್ರಧಾನಿ ಕೂಡ ಓರ್ವ ಡೋಲು ಕಲಾವಿದನ ಜೊತೆಗೆ ನಿಂತು ಡೋಲಿನ ಬೀಟ್‌ಗಳನ್ನು ನುಡಿಸಿದರು.
“ಮಹಾರಾಷ್ಟ್ರದ ನಾಗ್ಪುರದಲ್ಲಿ ಸಾಂಪ್ರದಾಯಿಕ ಸ್ವಾಗತ” ಎಂಬ ಶೀರ್ಷಿಕೆಯೊಂದಿಗೆ ಪ್ರಧಾನಮಂತ್ರಿ ಕಾರ್ಯಾಲಯವು ಪ್ರಧಾನ ಮಂತ್ರಿ ಡೋಲು ನುಡಿಸುವ ವೀಡಿಯೊವನ್ನು ಹಂಚಿಕೊಂಡಿದೆ.
ಭಾನುವಾರ ಬೆಳಗ್ಗೆ ನಾಗ್ಪುರಕ್ಕೆ ಆಗಮಿಸಿದ ಪ್ರಧಾನಿ ವಂದೇ ಭಾರತ್ ಎಕ್ಸ್‌ಪ್ರೆಸ್, ನಾಗ್ಪುರ ಮೆಟ್ರೋ ಹಂತ I, ಸಮೃದ್ಧಿ ಮಹಾಮಾರ್ಗ್ ಮತ್ತು ಏಮ್ಸ್ ನಾಗ್ಪುರ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.