ಮಹತ್ವದ ನಿರ್ಣಯವೊಂದರಲ್ಲಿ ’ಪ್ರಧಾನ ಮಂತ್ರಿ ಪೋಷಣ್’ ಕಾರ್ಯಕ್ರಮಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ದೇಶಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಮಾಡುವ ಯೋಜನೆಗೆ ’ಪಿಎಂ ಪೋಷಣ್’ ಎಂಬ ನಾಮಕರಣ ಮಾಡಲಾಗಿದೆ.
ಬುಧವಾರದ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಭೆಯ ವೇಳೆ ಮೇಲ್ಕಂಡ ಯೋಜನೆ ಹಾಗೂ ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸಂಬಂಧ ಇನ್ನಿತರ ಆರ್ಥಿಕ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಪ್ರಧಾನ ಮಂತ್ರಿ ಪೋಷಣ್ ಸಂಬಂಧ 10 ಮುಖ್ಯ ಅಂಶಗಳು ಇಂತಿವೆ.
1. ದೇಶಾದ್ಯಂತ ಇರುವ 11.2 ಲಕ್ಷಕ್ಕೂ ಹೆಚ್ಚಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳನ್ನು ಈ ಯೋಜನೆ ತಲುಪಲಿದೆ.
2. 2021-22 ರಿಂದ 2025-26ರ ವರೆಗೂ ಈ ಯೋಜನೆ ಜಾರಿಯಲ್ಲಿರಲಿದೆ.
3. ಯೋಜನೆ ಮೇಲೆ 1.31 ಲಕ್ಷ ಕೋಟಿ ರೂ. ಗಳನ್ನು ವಿನಿಯೋಗಿಸಲಾಗುವುದು.
4. ಕೇಂದ್ರ ಸರ್ಕಾರವು 54,061.73 ಕೋಟಿ ರೂ.ಗಳನ್ನು ವ್ಯಯಿಸಲಿದೆ.
5. ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟಾರೆ 31,733.17 ಕೋಟಿ ರೂ.ಗಳ ಆರಂಭಿಕ ವೆಚ್ಚದಿಂದ ಯೋಜನೆಗೆ ಚಾಲನೆ ನೀಡಲಾಗುವುದು.
6. ಹೆಚ್ಚುವರಿಯಾಗಿ ಆಹಾರ ಧಾನ್ಯಗಳ ವೆಚ್ಚವನ್ನು ಹೊರಲಿರುವ ಕೇಂದ್ರ ಸರ್ಕಾರಕ್ಕೆ ಇದರಿಂದಾಗಿ 45,000 ಕೋಟಿ ರೂ.ಗಳ ಹೊರೆ ಬೀಳಲಿದೆ.
7. 1-8ನೇ ತರಗತಿ ವಿದ್ಯಾರ್ಥಿಗಳಿಗೆ ಪಿಎಂ ಪೋಷಣ್ ಯೋಜನೆ ಮೂಲಕ ಬಿಸಿಯೂಟ ವಿತರಿಸಲಾಗುವುದು.
8. ಯೋಜನೆಯಿಂದ 11.80 ಕೋಟಿಗೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
9. ಪಿಎಂ-ಪೋಷಣ್ ಯೋಜನೆಯನ್ನು ಈ ಹಿಂದೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಎಂದು ಕರೆಯಲಾಗುತ್ತಿತ್ತು.
10. ಈ ಬಿಸಿಯೂಟವನ್ನು ವಿವಿಧ ಸಮಾಜಗಳ ಜನರ ಒಟ್ಟಾಗಿ ತಯಾರಿಸಲು ಪ್ರೋತ್ಸಾಹಿಸಲಾಗುವುದು.