ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದಲ್ಲಿ ಕೋವಿಡ್ ನಿರ್ವಹಣೆಯ ಕುರಿತಂತೆ ಶ್ವೇತ ಪತ್ರ ಬಿಡುಗಡೆ ಮಾಡಿದ್ದು ಲಸಿಕೆ ಪೂರೈಕೆಯಲ್ಲಿ 100 ಪ್ರತಿಶತ ಸಾಧನೆ ಮಾಡೋದು ಕೊರೊನಾ ವಿರುದ್ಧ ಹೋರಾಟದ ಆಧಾರಸ್ತಂಭವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಉದ್ದೇಶ ಪ್ರಧಾನಿ ಮೋದಿಯನ್ನ ಟೀಕಿಸೋದು ಅಲ್ಲ ಬದಲಾಗಿ ಕೊರೊನಾ ಮೂರನೇ ಅಲೆಯಿಂದ ದೇಶವನ್ನ ಕಾಪಾಡೋದಷ್ಟೇ ನಮ್ಮ ಉದ್ದೇಶವಾಗಿದೆ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕೋವಿಡ್ 19 ವಿಚಾರವಾಗಿ ಬಿಡುಗಡೆ ಮಾಡಲಾದ ಈ ಶ್ವೇತಪತ್ರದ ಉದ್ದೇಶ ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡಿ ತೋರಿಸೋದಲ್ಲ ಬದಲಾಗಿ ಕೊರೊನಾ ವಿರುದ್ಧ ದೇಶವನ್ನ ಸಜ್ಜು ಮಾಡೋದಾಗಿದೆ. ಕೊರೊನಾ ಮೂರನೆ ಅಲೆಯು ಭಯಾನಕವಾಗಿರಲಿದೆ ಎಂಬುದನ್ನ ಇಡೀ ದೇಶವೇ ತಿಳಿದಿದೆ ಎಂದು ಹೇಳಿದ್ರು.
ಕೊರೊನಾ 2ನೆ ಅಲೆಯಲ್ಲಿ ಸಾವಿಗೀಡಾದ 90 ಪ್ರತಿಶತ ಮಂದಿಯನ್ನ ನಾವು ಬಚಾವ್ ಮಾಡಬಹುದಾಗಿತ್ತು. ಆದರೆ ಆಕ್ಸಿಜನ್ ಅಭಾವದಿಂದಾಗಿ ಈ ಸಾವುಗಳು ಸಂಭವಿಸಿವೆ. ಆದರೆ ಈಗ ದೇಶದಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಯಾವುದೇ ಅಭಾವವಿಲ್ಲ. ಪ್ರಧಾನಿಯ ಕಣ್ಣೀರು ದೇಶದ ಜನತೆಯನ್ನ ಕಾಪಾಡಲು ಸಾಧ್ಯವಿಲ್ಲ. ವೈದ್ಯಕೀಯ ಆಮ್ಲಜನಕದಿಂದ ಮಾತ್ರ ಜನತೆಯ ಜೀವ ಉಳಿಯಲಿದೆ ಎಂದು ಹೇಳಿದ್ರು.
ಕೇಂದ್ರ ಸರ್ಕಾರವು ಕೊರೊನಾ ಮೊದಲ ಹಾಗೂ ಎರಡನೆ ಅಲೆಯನ್ನ ನಿರ್ವಹಿಸುವಲ್ಲಿ ವಿಫಲವಾಗಿದೆ. ಇದಕ್ಕೆ ಕಾರಣ ಏನು ಅನ್ನೋದನ್ನೂ ನಾವು ಪಟ್ಟಿ ಮಾಡಿದ್ದೇವೆ. ಕೋವಿಡ್ 19 ರೂಪಾಂತರವಾಗುತ್ತಲೇ ಇರೋದ್ರಿಂದ ಕೊರೊನಾ ಮೂರನೆ ಅಲೆಗೆ ಇದು ಮುಗಿಯುತ್ತೆ ಎಂಬ ನಂಬಿಕೆ ನನಗಿಲ್ಲ ಎಂದು ಆತಂಕ ಹೊರಹಾಕಿದ್ರು.
ಹೀಗಾಗಿ ಮೋದಿ ಸರ್ಕಾರವು ಬಿಜೆಪಿ ಅಥವಾ ಇತರೆ ಪಕ್ಷದ ಸರ್ಕಾರ ಇರುವ ರಾಜ್ಯ ಎಂದು ತಾರತಮ್ಯ ಮಾಡದೇ ಎಲ್ಲಾ ರಾಜ್ಯಗಳಲ್ಲಿ ಸೂಕ್ತ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಿದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ನಮಗೆ ಗೆಲುವು ಸಿಗಲಿದೆ ಎಂದು ಹೇಳಿದ್ದಾರೆ.