ಖ್ಯಾತ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈನ ಅಟಲ್ ಸೇತುವೆ ಮೇಲೆ ಸಂಚರಿಸಿದ್ದು, ಈ ಕುರಿತಂತೆ ವಿಡಿಯೋ ಒಂದನ್ನು ಮಾಡಿದ್ದರು. ಈ ಸೇತುವೆಯನ್ನು ನರೇಂದ್ರ ಮೋದಿಯವರು ಉದ್ಘಾಟಿಸಿದ್ದು, ತಮ್ಮ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ, ಮೋದಿಯವರು ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಕೊಂಡಾಡಿದ್ದರು.
ಮುಂಬೈನ ಅಟಲ್ ಸೇತುವೆ ಕಾರಣಕ್ಕಾಗಿ ಸಂಚಾರದ ಅವಧಿ ಎರಡು ಗಂಟೆಗಳಿಂದ 20 ನಿಮಿಷಕ್ಕೆ ಇಳಿಕೆಯಾಗಿದೆ ಎಂದು ಹೇಳಿದ್ದ ‘ಪುಷ್ಪಾ’ ನಟಿ ರಶ್ಮಿಕಾ ಮಂದಣ್ಣ, ಅಭಿವೃದ್ಧಿ ಕಾರ್ಯಗಳನ್ನು ಮಾಡುವವರಿಗೆ ನಿಮ್ಮ ಮತ ಚಲಾಯಿಸಿ ಎಂದು ಈ ವಿಡಿಯೋದಲ್ಲಿ ಹೇಳಿದ್ದರು.
ರಶ್ಮಿಕಾ ಮಂದಣ್ಣ ಈ ವಿಡಿಯೋ ಹಂಚಿಕೊಂಡ ಒಂದು ಗಂಟೆಯೊಳಗಾಗಿ ಇದನ್ನು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ತಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತೆಂದರೆ ಇದಕ್ಕಿಂತ ಇನ್ನೇನು ಬೇಕು. ಸಾರ್ವಜನಿಕರ ಜೊತೆ ಸಂಪರ್ಕವಿರಲು ಹಾಗೂ ಅವರ ಜೀವನಮಟ್ಟ ಸುಧಾರಿಸಿದ ತೃಪ್ತಿ ದೊರೆಯುತ್ತದೆ ಎಂದಿದ್ದಾರೆ. ನರೇಂದ್ರ ಮೋದಿಯವರ ಈ ಪೋಸ್ಟ್ ಈಗ ಫುಲ್ ವೈರಲ್ ಆಗಿದೆ.