alex Certify BIG BREAKING: ಅಮೆರಿಕ ಅಧ್ಯಕ್ಷ, ಬ್ರಿಟನ್ ಪ್ರಧಾನಿಗಿಂತಲೂ ವಿಶ್ವದಲ್ಲೇ ಮೋದಿ ಅತ್ಯಂತ ಜನಪ್ರಿಯ ನಾಯಕ; ಶೇ. 71 ರಷ್ಟು ರೇಟಿಂಗ್ ನೊಂದಿಗೆ ಘಟಾನುಘಟಿ ನಾಯಕರ ಹಿಂದಿಕ್ಕಿದ ಪ್ರಧಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಅಮೆರಿಕ ಅಧ್ಯಕ್ಷ, ಬ್ರಿಟನ್ ಪ್ರಧಾನಿಗಿಂತಲೂ ವಿಶ್ವದಲ್ಲೇ ಮೋದಿ ಅತ್ಯಂತ ಜನಪ್ರಿಯ ನಾಯಕ; ಶೇ. 71 ರಷ್ಟು ರೇಟಿಂಗ್ ನೊಂದಿಗೆ ಘಟಾನುಘಟಿ ನಾಯಕರ ಹಿಂದಿಕ್ಕಿದ ಪ್ರಧಾನಿ

ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರಂತಹ ಪ್ರಮುಖ ಜಾಗತಿಕ ನಾಯಕರನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರು 71 ಪ್ರತಿಶತ ರೇಟಿಂಗ್‌ನೊಂದಿಗೆ ವಯಸ್ಕರಲ್ಲಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.

ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ನಡೆಸಿದ ಸಮೀಕ್ಷೆಯಲ್ಲಿ, ಮೋದಿ ಅವರು ಶೇಕಡ 71 ರ ಅನುಮೋದನೆ ಪಡೆದುಕೊಂಡರೆ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇಕಡ 66 ರಷ್ಟು ಅನುಮೋದನೆಯೊಂದಿಗೆ ಎರಡನೇ ಸ್ಥಾನ ಪಡೆದರು, ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ ಶೇಕಡ 60 ರಷ್ಟು ಅನುಮೋದನೆಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

43 ರಷ್ಟು ಅನುಮೋದನೆ ರೇಟಿಂಗ್‌ನೊಂದಿಗೆ, ಯುಎಸ್ ಅಧ್ಯಕ್ಷ ಜೋ ಬಿಡನ್ 13 ವಿಶ್ವ ನಾಯಕರ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದರು. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಶೇ 26 ರೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಪಟ್ಟಿಯಲ್ಲಿರುವ ಇತರ ನಾಯಕರು ಜೈರ್ ಬೋಲ್ಸನಾರೊ(ಬ್ರೆಜಿಲ್ ಅಧ್ಯಕ್ಷ), ಫ್ಯೂಮಿಯೊ ಕಿಶಿಡಾ(ಜಪಾನ್ ಪ್ರಧಾನಿ), ಇಮ್ಯಾನುಯೆಲ್ ಮ್ಯಾಕ್ರನ್(ಫ್ರಾನ್ಸ್ ಅಧ್ಯಕ್ಷ); ಮೂನ್ ಜೇ-ಇನ್(ದಕ್ಷಿಣ ಕೊರಿಯಾದ ಅಧ್ಯಕ್ಷ), ಸ್ಕಾಟ್ ಮಾರಿಸನ್(ಆಸ್ಟ್ರೇಲಿಯನ್ ಪ್ರಧಾನ ಮಂತ್ರಿ); ಪೆಡ್ರೊ ಸ್ಯಾಂಚೆಜ್(ಸ್ಪೇನ್ PM); ಓಲಾಫ್ ಸ್ಕೋಲ್ಜ್(ಜರ್ಮನ್ ಚಾನ್ಸೆಲರ್) ಮತ್ತು ಜಸ್ಟಿನ್ ಟ್ರುಡೊ (ಕೆನಡಾ PM).

ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಪ್ರಸ್ತುತ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಯುಕೆ ಮತ್ತು ಯುಎಸ್‌ಗಳಲ್ಲಿನ ಸರ್ಕಾರಿ ನಾಯಕರು ಮತ್ತು country trajectories ಅನುಮೋದನೆ ರೇಟಿಂಗ್‌ ಗಳನ್ನು ಟ್ರ್ಯಾಕ್ ಮಾಡುತ್ತಿದೆ.

ಎಲ್ಲಾ 13 ದೇಶಗಳಿಗೆ ಇತ್ತೀಚಿನ ಡೇಟಾದೊಂದಿಗೆ, ಜಗತ್ತಿನಾದ್ಯಂತ ಬದಲಾಗುತ್ತಿರುವ ರಾಜಕೀಯ ಡೈನಾಮಿಕ್ಸ್‌ ಗೆ ನೈಜ-ಸಮಯದ ಒಳನೋಟವನ್ನು ನೀಡುತ್ತದೆ, ಇತ್ತೀಚಿನ ಅನುಮೋದನೆ ರೇಟಿಂಗ್‌ಗಳು ಜನವರಿ 13-19, 2022 ರಿಂದ ಸಂಗ್ರಹಿಸಲಾದ ಡೇಟಾವನ್ನು ಆಧರಿಸಿವೆ. ಅನುಮೋದನೆಯ ರೇಟಿಂಗ್‌ಗಳು ಪ್ರತಿ ದೇಶದ ವಯಸ್ಕ ನಿವಾಸಿಗಳ 7 ದಿನದ moving(ಚಲಿಸುವ) ಸರಾಸರಿಯನ್ನು ಆಧರಿಸಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...