ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳೂರಿಗೆ ಆಗಮಿಸಲಿದ್ದು, ಬೃಹತ್ ರೋಡ್ ಶೋ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಇಂದು ಮಂಗಳೂರಿಗೆ ಆಗಮಿಸಲಿದ್ದು, ರಾತ್ರಿ 7:45 ಮಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
ರೋಡ್ ಶೋ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆಯಿಂದಲೇ ಮಮ್ಗಳೂರಿನ ಹಲವು ಮಾರ್ಗಗಳು ಸಂಚಾರಕ್ಕೆ ಬಂದ್ ಆಗಲಿವೆ.
ರೋಡ್ ಶೋ ನಡೆಯುವ ಲೇಡಿ ಹಿಲ್ ಬಳಿಯ ಶ್ರೀನಾರಾಯಣ ಗುರು ವೃತ್ತ, ಲಾಲ್ ಬಾಗ್, ಬಲ್ಲಾಳ್ ಬಾಗ್, ಕೊಡಿಯಾಲ್ ಗುತ್ತು, ಬಿ.ಜಿ.ಸ್ಕೂಲ್-ಪಿವಿ ಎಸ್ – ನವ ಭಾರತ ವೃತ್ತ ಹಂಪನಕಟ್ಟೆಯವರೆಗೆ ವಾಹನಗಳ ದ್ಸಂಚಾರ ನಿಷೇಧಿಸಲಾಗಿದೆ.
ಕಾರ್ ಸ್ಟ್ರೀಟ್-ಕುದ್ರೋಳಿ- ಕೂಳೂರು ಫೆರ್ರಿ ರಸ್ತೆಕಡೆಯಿಂದ ಅಡ್ಡ ರಸ್ತೆ ಮೂಲಕ ಎಂ.ಜಿ.ರಸ್ತೆ ಪ್ರವೇಶಿಸುವ ಎಲ್ಲಾ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
ಕೆಎಸ್ಆರ್ಟಿಸಿ, ಶ್ರೀದೇವಿ ಕಾಲೇಜು ರಸ್ತೆ, ಕೊಡಿಯಾಲ್ ಗುತ್ತು ರಸ್ತೆ, ಜೈಲು ರಸ್ತೆ ಹಾಗೂ ಬಿಜೈ ಚರ್ಚ್ ರಸ್ತೆ ಮೂಲಕ ಎಂ.ಜಿ ರಸ್ತೆಗೆ ಬರುವ ಅಡ್ಡ ರಸ್ತೆ ಹಾಗೂ ಬಂಟ್ಸ್ ಹಾಸ್ಟೆಲ್ ಮೂಲಕ ಪಿವಿಎಸ್ ಕಡೆ ತೆರಳಲು ನಿರ್ಬಂಧ ವಿಧಿಸಲಾಗಿದೆ. ಕೊಟ್ಟಾರ ಚೌಕಿ, ಉರ್ವಾ ಸ್ಟೋರ್, ಕೋಟೆಕಣಿ ಕ್ರಾಸ್, ಮಣ್ಣಗುಡ್ಡ ಜಂಕ್ಷನ್ ಮತ್ತು ಉರ್ವಾ ಮಾರ್ಕೆಟ್ ಕಡೆಯಿಂದ ನಾರಾಯಣಗುರು ವೃತ್ತ (ಲೇಡಿಹಿಲ್)ದ ಕಡೆಗೆ ಹೋಗಲು ವಾಹನಗಳಿಗೆ ನಿಷೇಧಿಸಲಾಗಿದೆ.
ಇನ್ನು ಕೆಎಸ್ಆರ್ಟಿಸಿಯಿಂದ ಲಾಲ್ಬಾಗ್ ಮುಖಾಂತರ ನಾರಾಯಣಗುರು ವೃತ್ತ ಕಡೆ ಹೋಗುವ ಹಾಗೂ ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿ, ಕೋರ್ಟ್ ಕ್ರಾಸ್ ರಸ್ತೆಯಿಂದ ಪಿವಿಎಸ್ ಹೋಗುವ ಮತ್ತು ಎಂಜಿ ರೋಡ್, ಕೆ.ಎಸ್.ರಾವ್ ರೋಡ್, ಡೊಂಗರಕೇರಿ ರಸ್ತೆ, ಗದ್ದೆಕೇರಿ ರೋಡ್, ವಿ.ಟಿ. ರೋಡ್, ಶಾರದಾ ವಿದ್ಯಾಲಯ ರಸ್ತೆಯಿಂದ ನವಭಾರತ ಸರ್ಕಲ್ ಕಡೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಎಂಜಿ ರಸ್ತೆಯಿಂದ ಜೈಲ್ ರೋಡ್ ಮುಖಾಂತರ ಬಿಜೈ ಚರ್ಚ್ ರೋಡ್ನಲ್ಲಿ ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ.
ಕೆಲವೆಡೆ ವಾಹನ ಪಾರ್ಕಿಂಗ್ ನಿಷೇಧ
ಬಜ್ಪೆ ವಿಮಾನ ನಿಲ್ದಾಣದಿಂದ ಕೆಂಜಾರು, ಮರವೂರು, ಕಾವೂರು, ಬೊಂದೇಲ್, ಮೇರಿಹಿಲ್, ಕೆ.ಪಿ.ಟಿ, ಕೊಟ್ಟಾರ ಚೌಕಿ, ಉರ್ವ ಸ್ಟೋರ್ ಮತ್ತು ನಾರಾಯಣಗುರು ವೃತ್ತ (ಲೇಡಿಹಿಲ್) ವರೆಗೆ ರಸ್ತೆಯ ಎರಡು ಬದಿಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ.
ಇನ್ನು ರೋಡ್ ಶೋ ನಡೆಯುವ ಲೇಡಿಹಿಲ್ ಬಳಿ ನಾರಾಯಣಗುರು ವೃತ್ತದಿಂದ ಹಂಪನಕಟ್ಟೆ ವರೆಗೆ, ಎಲ್.ಹೆಚ್.ಹೆಚ್, ಬಾವುಟಗುಡ್ಡ, ಬಂಟ್ಸ್ ಹಾಸ್ಟೆಲ್, ಕದ್ರಿ ಕಂಬಳದ ಎರಡು ಬದಿ, ಕಾವೂರು, ಪಂಜಿಮೊಗೆರು, ಕೊಟ್ಟಾರಚೌಕಿವರೆಗೆ ವಾಹನ ನಿಲುಗಡೆಗೆ ಅವಕಾಶವಿಲ್ಲ.
ಪಾರ್ಕಿಂಗ್ ಸ್ಥಳ:
ರೋಡ್ ಶೋ ಹಿನ್ನೆಲೆಯಲ್ಲಿ ಈ ಸ್ಥಳಗಳಲ್ಲಿ ಮಾತ್ರ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ. ಕರಾವಳಿ ಮೈದಾನ, ಲೇಡಿಹಿಲ್ ಶಾಲಾ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ, ಉರ್ವ ಮಾರ್ಕೆಟ್ ಮೈದಾನ, ಉರ್ವ ಸ್ಟೋರ್ ಮೈದಾನ, ಉರ್ವ ಕೆನರಾ ಶಾಲಾ ಮೈದಾನ, ಕೆನರಾ ಕಾಲೇಜು ಮೈದಾನ, ಡೊಂಗರಕೇರಿ ಕೆನರಾ ಶಾಲಾ ಮೈದಾನ. ಗಣಪತಿ ಶಾಲಾ ಮೈದಾನ, ರಾಮಕೃಷ್ಣ ಶಾಲಾ ಮೈದಾನ, ಬಂಟ್ಸ್ ಹಾಸ್ಟೇಲ್, ಸಿ.ವಿ ನಾಯಕ್ ಹಾಲ್ ಮೈದಾನ, ಟಿ.ಎಂ.ಎ ಪೈ ಹಾಲ್ ಮೈದಾನ, ಬಿ.ಇ.ಎಂ ಶಾಲಾ ಮೈದಾನ, ನೆಹರೂ ಮೈದಾನ, ಪುರಭವನ ಆವರಣದಲ್ಲಿ, ಕದ್ರಿ ಮೈದಾನ, ಕೆಪಿಟಿ ಕಾಲೇಜು ಮೈದಾನ, ಕೆಪಿಟಿ ಬಳಿಯ ಆರ್.ಟಿ.ಓ ಮೈದಾನ, ಪದುವಾ ಕಾಲೇಜು ಮೈದಾನ, ಗೋಲ್ಡ್ ಫಿಂಚ್ ಸಿಟಿ ಮೈದಾನ, ಕೂಳೂರು, ಸುಲ್ತಾನ್ ಬತ್ತೇರಿ ಗ್ರೌಂಡ್ಸ್, ಗೋಕರ್ಣನಾಥೇಶ್ವರ ಕಾಲೇಜು ಗ್ರೌಂಡ್, ಎಮ್ಮೆಕರೆ ಮೈದಾನ, ಮಂಗಳೂರು ವಿಶ್ವವಿದ್ಯಾನಿಲಯ ಮೈದಾನ, ಹಂಪನಕಟ್ಟೆ, ಮಿಲಾಗ್ರಿಸ್ ಚರ್ಚ್ ಪಾರ್ಕಿಂಗ್ ಗ್ರೌಂಡ್, ಮಿಲಾಗ್ರಿಸ್ ಕಾಲೇಜು ಮೈದಾನ, ಬಲ್ಮಠ ಶಾಂತಿ ನಿಲಯದ ಮೈದಾನ, ಸೇಂಟ್ ಸೆಬಾಸ್ಟಿಯನ್ ಹಾಲ್ ಫಕಿಂಗ್ ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಂಗಳೂರು ಕಮಿಷ್ನರ್ ಮಾಹಿತಿ ನೀಡಿದ್ದಾರೆ.