![ಕಲ್ಯಾಣ ಕರ್ನಾಟಕ ಭಾಗದ ಎರಡು ಜಿಲ್ಲೆಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮನ: ಕೇಸರಿ ಪಾಳಯದಲ್ಲಿ ಉತ್ಸಾಹ, ಬಿರುಸಿನ- Kannada Prabha](https://media.kannadaprabha.com/uploads/user/imagelibrary/2023/1/19/w900X450/modi.jpg?w=400&dpr=2.6)
ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿ ಕಲಬುರ್ಗಿಗೆ ಆಗಮಿಸಿದ್ದು, ಪ್ರಧಾನಿ ಆಗಮಿಸುವ ಮೊದಲೇ ಕಂದಾಯ ಅಧಿಕಾರಿಗಳು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿರುವ ಘಟನೆ ನಡೆದಿದೆ.
ಸೇಡಂ ತಾಲೂಕಿನ ಮಳಖೇಡದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಫಲಾನುಭವಿಗಳಿಗೆ ಹಂಚಲು ಹಕ್ಕು ಪತ್ರ ತಂದಿದ್ದು, ಮೋದಿ ಆಗಮನಕ್ಕೂ ಮುನ್ನವೇ ಲಂಬಾಣಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ್ದಾರೆ.
ಪ್ರಧಾನಿ ಮೋದಿಯವರು ಬಂದ ಬಳಿಕ ಹಕ್ಕು ಪತ್ರ ತೋರಿಸುವಂತೆ ಸೂಚಿಸಲಾಗಿದೆ.