ನವದೆಹಲಿ: ಒಂದು ಕೋಟಿಗೂ ಹೆಚ್ಚು ಮಕ್ಕಳು ತಮ್ಮ ‘ಮನ್ ಕಿ ಬಾತ್’ ಅನ್ನು ಪೋಸ್ಟ್ ಕಾರ್ಡ್ ಮೂಲಕ ನನಗೆ ಕಳುಹಿಸಿದ್ದಾರೆ. ಈ ಪೋಸ್ಟ್ ಕಾರ್ಡ್‌ಗಳು ದೇಶದ ಹಲವು ಭಾಗಗಳಿಂದ ಮತ್ತು ವಿದೇಶಗಳಿಂದಲೂ ಬಂದಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಪೋಸ್ಟ್ ಕಾರ್ಡ್‌ಗಳು ನಮ್ಮ ದೇಶದ ಭವಿಷ್ಯಕ್ಕಾಗಿ ನಮ್ಮ ಹೊಸ ಪೀಳಿಗೆಯ ವಿಶಾಲ ಮತ್ತು ಸಮಗ್ರ ದೃಷ್ಟಿಕೋನವನ್ನು ನೀಡುತ್ತವೆ ಎಂದು ‘ಮನ್ ಕಿ ಬಾತ್’ನಲ್ಲಿ ದೇಶದ ಜನರುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಇಂಡಿಯಾ ಗೇಟ್ ಬಳಿಯ ‘ಅಮರ್ ಜವಾನ್ ಜ್ಯೋತಿ’ ಮತ್ತು ಹತ್ತಿರದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿನ ಜ್ವಾಲೆ ಒಂದಾಗಿ ವಿಲೀನಗೊಳಿಸಿರುವುದನ್ನು ನಾವು ನೋಡಿದ್ದೇವೆ. ಈ ಭಾವನಾತ್ಮಕ ಕ್ಷಣದಲ್ಲಿ ಅನೇಕ ದೇಶವಾಸಿಗಳು ಮತ್ತು ಹುತಾತ್ಮರ ಕುಟುಂಬದವರು ಕಣ್ಣೀರಿಟ್ಟಿದ್ದಾರೆ ಎಂದರು.
‘ಅಮರ್ ಜವಾನ್ ಜ್ಯೋತಿ'(ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ) ಹುತಾತ್ಮರಿಗೆ ಒಂದು ಮಹಾನ್ ಗೌರವವಾಗಿದೆ ಎಂದು ಕೆಲವು ಅನುಭವಿಗಳು ನನಗೆ ಬರೆದಿದ್ದಾರೆ. ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ‘ಆಜಾದಿ ಕಾಮೃತ್ ಮಹೋತ್ಸವ’ದ ಭಾಗವಾಗಿ ಅನೇಕ ಪ್ರಶಸ್ತಿ, ಪ್ರಧಾನ ಮಂತ್ರಿ ಬಾಲ ಪುರಸ್ಕಾರ, ಪದ್ಮ ಪ್ರಶಸ್ತಿಗಳನ್ನೂ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.