ನವದೆಹಲಿ: ರಾತ್ರಿ ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ. ಪ್ರಧಾನಿ ಖಾತೆಯಿಂದ ಬಿಟ್ ಕಾಯಿನ್ ಬಗ್ಗೆ ಟ್ವೀಟ್ ಮಾಡಿದ್ದು, ಸರ್ಕಾರ 500 ಬಿಟ್ ಕಾಯಿನ್ ಖರೀದಿಸಿದೆ. ಅವುಗಳನ್ನು ಜನತೆಗೆ ಹಂಚಲಾಗುವುದು ಎಂದು ಟ್ವೀಟ್ ಮಾಡಲಾಗಿತ್ತು.
ಈ ಮೂಲಕ ಭಾರತದಲ್ಲಿ ಬಿಟ್-ಕಾಯಿನ್ ಚಲಾವಣೆ ಕಾನೂನು ಬದ್ಧವಾಗಿರುತ್ತದೆ ಎಂದು ಟ್ವೀಟ್ ಮಾಡಲಾಗಿತ್ತು. ಬಿಟ್ ಕಾಯಿನ್ ಗಳನ್ನು ಪ್ರಜೆಗಳಿಗೆ ಹಂಚುವುದಾಗಿ ಟ್ವೀಟ್ ಮಾಡಲಾಗಿದ್ದು, ಇದು ಹ್ಯಾಕರ್ ಗಳು ಮಾಡಿರುವ ಟ್ವೀಟ್ ಆಗಿದೆ. ಬಳಿಕ ಟ್ವಿಟರ್ ಗೆ ಮಾಹಿತಿ ನೀಡಿ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಖಾತೆ ಸರಿಪಡಿಸಲಾಗಿದೆ. ಈ ಹಿಂದೆ ಮಾಡಿರುವ ಟ್ವೀಟ್ ಪರಿಗಣಿಸದಂತೆ ಸ್ಪಷ್ಟನೆ ನೀಡಲಾಗಿದೆ. ಪ್ರಧಾನಿ ಖಾತೆಯಿಂದ ಬಿಟ್ ಕಾಯಿನ್ ಸಂಬಂಧ ಲಿಂಕ್ ಶೇರ್ ಆದರೆ ಪರಿಗಣಿಸಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.