ದೆಹಲಿ: ಆರ್‌ಎಂಎಲ್ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಪಿಎಂ ಮೋದಿ ಥಮ್ಸ್ ಅಪ್ (ತಮ್ಮ ಎರಡೂ ಕೈಗಳಿಂದ ಹೆಬ್ಬೆರಳಿನ ಸೂಚನೆ) ಮಾಡಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ.
ಭಾರತವು ಗುರುವಾರ 100 ಕೋಟಿ ಕೋವಿಡ್ -19 ವ್ಯಾಕ್ಸಿನೇಷನ್ ಗಡಿ ದಾಟಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ ಕಾರ್ಯಕರ್ತರು ಮತ್ತು ಲಸಿಕೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಲು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಪ್ರಧಾನಿ ಥಮ್ಸ್ ಅಪ್ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 7,000 ಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ಒಬ್ಬ ಬಳಕೆದಾರರು ಇದನ್ನು ‘ದಿನದ ಚಿತ್ರ’ ಎಂದು ಹೇಳಿದ್ದಾರೆ.
ಜನವರಿ 16 ರಂದು ಭಾರತದ ಮೆಗಾ ಇನಾಕ್ಯುಲೇಷನ್ ಡ್ರೈವ್ ನ ಒಂಬತ್ತು ತಿಂಗಳ ನಂತರ, ಇಂದು ಬೆಳಿಗ್ಗೆ 9:47 ಕ್ಕೆ ಕೋವಿನ್ ಪೋರ್ಟಲ್ 100 ಕೋಟಿ ಲಸಿಕೆ ಡೋಸ್-ಮಾರ್ಕ್ ಅನ್ನು ತಲುಪಿದೆ.
ಭಾರತವು ತನ್ನ ಕೋವಿಡ್ -19 ಲಸಿಕೆ ಅಭಿಯಾನವನ್ನು ಜನವರಿ 16, 2021 ರಂದು ಆರಂಭಿಸಿತು. ಮೊದಲ ಹಂತದ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರಿಗೆ ಕೊಡಲಾಯಿತು. ಮಾರ್ಚ್ 1 ರಂದು, 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲಾಯಿತು. ಮೂರನೇ ಹಂತದಲ್ಲಿ, ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವ್ಯಕ್ತಿಗಳು ಕೋವಿಡ್ -19 ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.