ಪ್ರಧಾನಿ ಮೋದಿ ಅವರು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಗೆ ಭದ್ರತಾ ಲೋಪ ಉಂಟಾಗಿದೆ ಎನ್ನಲಾಗಿದ್ದು, ಹೆಲಿಕಾಪ್ಟರ್ ಬಳಿ ಕಪ್ಪು ಬಲೂನ್ ಹಾರಿಬಿಟ್ಟಿದ್ದ ಮೂವರು ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗಿದೆ.
ಮೋದಿ ಅವರ ಭೇಟಿಯ ವಿರುದ್ಧ ಪ್ರತಿಭಟನೆಯನ್ನು ಪ್ರದರ್ಶಿಸಲು ಕಪ್ಪು ಬಲೂನ್ ಗಳ ಗೊಂಚಲುಗಳನ್ನು ಆಕಾಶದಲ್ಲಿ ಬಿಡಲಾಗಿದೆ. ಗನ್ನವರಂ ವಿಮಾನ ನಿಲ್ದಾಣದಲ್ಲಿ ಮೋದಿ ಅವರ ಹೆಲಿಕಾಪ್ಟರ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಬಲೂನ್ ಗಳನ್ನು ಹಾರಿಬಿಟ್ಟಿದ್ದ ಮೂವರು ಕಾಂಗ್ರೆಸ್ ಮುಖಂಡರನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಕೇಂದ್ರದ ವಿರುದ್ಧ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಪ್ರತಿಭಟನೆಯ ಸಂಕೇತವಾಗಿ ಕೆಲವು ಕಾಂಗ್ರೆಸ್ ನಾಯಕರು ಕಪ್ಪು ಬಲೂನ್ ಗಳನ್ನು ಹಾರಿಬಿಟ್ಟಿದ್ದರು. ಗನ್ನವರಂ ವಿಮಾನ ನಿಲ್ದಾಣದಲ್ಲಿ ತಮ್ಮ ವಿಶೇಷ ವಿಮಾನವನ್ನು ಇಳಿಸಿದ ನಂತರ, ಪ್ರಧಾನ ಮಂತ್ರಿ ಅವರು ಹೆಲಿಕಾಪ್ಟರ್ ಮೂಲಕ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂಗೆ ತೆರಳಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮದಿನದ ಆಚರಣೆಗೆ ಚಾಲನೆ ನೀಡಿದರು.