ಎರ್ನಾಕುಲಂ: ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕೇರಳದ ಎರ್ನಾಕುಲಂನಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಪ್ರಧಾನಿ ಮೋದಿ ತಮ್ಮ ಭೇಟಿಯ ಸಮಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ರೋಡ್ ಶೋ ಸಮಯದಲ್ಲಿ ತಮಗೆ ದೊರೆತ ಉತ್ಸಾಹಭರಿತ ಸ್ವಾಗತದ ನಂತರ, ಮೋದಿ, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ಕೊಚ್ಚಿಯಲ್ಲಿನ ಪ್ರೀತಿಯಿಂದ ವಿನಮ್ರನಾಗಿದ್ದೇನೆ. ಕೆಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಉತ್ಸಾಹಭರಿತ ಸಾರ್ವಜನಿಕ ಪ್ರತಿಕ್ರಿಯೆಯ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಸಂಜೆ 7.45ಕ್ಕೆ ಕೆಪಿಸಿಸಿ ಜಂಕ್ಷನ್ನಿಂದ ಹೊರಟ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರೊಂದಿಗೆ ತೆರೆದ ವಾಹನವು ನಿಧಾನಗತಿಯಲ್ಲಿ ಸಾಗಿತು. ಮೆರವಣಿಗೆಯು ಸುಮಾರು 25 ನಿಮಿಷಗಳಲ್ಲಿ 1.3 ಕಿ.ಮೀ ದೂರವನ್ನು ಕ್ರಮಿಸಿತು.
ಇಲ್ಲಿನ ಕೆಪಿಸಿಸಿ ಜಂಕ್ಷನ್ನಿಂದ ಎರ್ನಾಕುಲಂ ಸರ್ಕಾರಿ ಅತಿಥಿ ಗೃಹದವರೆಗೆ 1.3 ಕಿ.ಮೀ ರೋಡ್ ಶೋ ಮಾರ್ಗದ ಎರಡೂ ಬದಿಗಳಲ್ಲಿ ಬಿಜೆಪಿ ಬೆಂಬಲಿಗರು ಸೇರಿದಂತೆ ಸಾವಿರಾರು ಜನರು ಹೂವುಗಳು, ಹಾರಗಳು ಮತ್ತು ಪಕ್ಷದ ಧ್ವಜಗಳೊಂದಿಗೆ ಸಾಲುಗಟ್ಟಿ ನಿಂತಿದ್ದರು. ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತು ‘ಮೋದಿ-ಮೋದಿ’ ಎಂಬ ಘೋಷಣೆಗಳೊಂದಿಗೆ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ್ದಾರೆ.