ನವದೆಹಲಿ: 2004ರಲ್ಲಿ ಇಂಡಿಯಾ ಶೈನಿಂಗ್ ಪ್ರಚಾರ ಮಾಡಿ ಸೋತಿದ್ದ ರೀತಿಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬಿಜೆಪಿಗೆ ಇಂಡಿಯಾ ಶೈನಿಂಗ್ ಗತಿಯೇ ಈ ಬಾರಿ ಆಗಲಿದೆ. 2004ರಲ್ಲಿ ಇಂಡಿಯಾ ಶೈನಿಂಗ್ ಪ್ರಚಾರ ಮಾಡಿ ಸೋತಿದ್ದ ಬಿಜೆಪಿಗೆ ಈ ಬಾರಿ ಮೋದಿ ಸರ್ಕಾರ ಘೋಷಿಸುತ್ತಿರುವ ಗ್ಯಾರಂಟಿಗಳಿಗೆ ಅದೇ ಗತಿ ಆಗಲಿದೆ ಎಂದು ಖರ್ಗೆ ಕುಟುಕಿದ್ದಾರೆ.
ಈಗ ಬಿಜೆಪಿ ಪ್ರಸ್ತುತಪಡಿಸುತ್ತಿರುವ ಗ್ಯಾರಂಟಿಗಳು 2004ರ ಇಂಡಿಯಾ ಶೈನಿಂಗ್ ಘೋಷಣೆಯ ಗತಿ ಕಾಣಲಿವೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾದ ಎಲ್ಲಾ ವಿಷಯಗಳ ಬಗ್ಗೆ ಮುಖಂಡರು, ಕಾರ್ಯಕರ್ತರು ಪ್ರತಿ ಹಳ್ಳಿ ಮನೆ ಮನೆಗೆ ತೆರಳಿ ಮಾಹಿತಿ ನೀಡಬೇಕು. ದೇಶ ಬದಲಾವಣೆ ಬಯಸುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಇದೇ ಕಾರಣಕ್ಕೆ ಕಾಂಗ್ರೆಸ್ ಪ್ರಣಾಳಿಕೆಯನ್ನು ವಿಶ್ವಾಸ ಮತ್ತು ಬದ್ಧತೆಯ ದಾಖಲೆ ಎಂದು ಪರಿಗಣಿಸಲಾಗಿದೆ ಎಂದು ಖರ್ಗೆ ಹೇಳಿದ್ದಾರೆ.
ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಖರ್ಗೆಯವರು ತಮ್ಮ ಭಾಷಣದಲ್ಲಿ ದೇಶದ ಬದಲಾವಣೆಯ ಬಲವಾದ ಬಯಕೆ ಹೊಂದಿದ್ದಾರೆ. ದೇಶವು ಬದಲಾವಣೆಯನ್ನು ಬಯಸುತ್ತಿದೆ. ಪ್ರಸ್ತುತ ಮೋದಿ ಸರ್ಕಾರವು ಹೇಳುತ್ತಿರುವ ಭರವಸೆಗಳು 2004 ರ ಬಿಜೆಪಿಯ “ಇಂಡಿಯಾ ಶೈನಿಂಗ್” ಘೋಷಣೆಯಂತೆಯೇ ಇರುತ್ತದೆ ಎಂದರು.
‘ಇಂಡಿಯಾ ಶೈನಿಂಗ್’ ಎಂಬುದು ಭಾರತದಲ್ಲಿನ ಆರ್ಥಿಕ ಆಶಾವಾದವನ್ನು ಉಲ್ಲೇಖಿಸುವ ರಾಜಕೀಯ ಘೋಷಣೆಯಾಗಿದ್ದು, 2004 ರ ಲೋಕಸಭೆ ಚುನಾವಣೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಡಿಯಲ್ಲಿ ಆಡಳಿತಾರೂಢ ಬಿಜೆಪಿ ಬಳಸಿತು. ಆದರೆ ಬಿಜೆಪಿ ಚುನಾವಣೆಯಲ್ಲಿ ಸೋತು ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದಿತು.