ಪಂಜಾಬ್‌ನ ಫ್ಲೈಓವರ್‌ನಲ್ಲಿ ಸಿಲುಕಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಾಹನಗಳ ಪಡೆಯಲ್ಲಿ ರಾಜ್ಯದ ವರಿಷ್ಠಾಧಿಕಾರಿಗಳ ಕಾರುಗಳಿದ್ದು, ಅವುಗಳಲ್ಲಿ ಚಾಲಕರ ಹೊರತಾಗಿ ಮತ್ತಾರೂ ಇರಲಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಪಂಜಾಬ್‌ನಲ್ಲಿ ವಿಧಾನ ಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಈ ಘಟನೆ ಜರುಗಿದೆ. ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಆಗಮಿಸಿದ ಮೋದಿರವರನ್ನು ಸ್ವಾಗತಿಸಲು ರಾಜ್ಯದ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಭಟಿಂಡಾ ವಿಮಾನ ನಿಲ್ದಾಣದಲ್ಲಿ ಇರಲಿಲ್ಲ.
ಗ್ರಾಹಕರಿಗೆ ಸಿಹಿ ಸುದ್ದಿ: ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ
“ಶಿಷ್ಟಾಚಾರದ ಪ್ರಕಾರ, ಪ್ರಧಾನಿ ಭೇಟಿ ನೀಡುವ ರಾಜ್ಯದ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರ ಜೊತೆಯಲ್ಲಿ ಇರಬೇಕು. ಆದರೆ ಮೂವರಲ್ಲಿ ಒಬ್ಬರೂ ಸಹ ಭಟಿಂಡಾ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿರವರನ್ನು ಸ್ವಾಗತಿಸಲು ಬಂದಿರಲಿಲ್ಲ,” ಎಂದು ಮೂಲಗಳು ತಿಳಿಸಿದ್ದು, ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆಂದು ಮೀಸಲಿಟ್ಟಿದ್ದ ಕಾರುಗಳು ಪ್ರಧಾನಿ ಮೋದಿಯವರ ವಾಹನಗಳ ಪಡೆಯಲ್ಲಿದ್ದವು ಎಂದಿವೆ.
“ನಾನು ಭಟಿಂಡಾ ವಿಮಾನ ನಿಲ್ದಾಣಕ್ಕೆ ಜೀವಂತ ಆಗಮಿಸಿದ್ದಕ್ಕೆ ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ತಿಳಿಸಬೇಕು,” ಎಂದು ಪ್ರಧಾನ ಮಂತ್ರಿ ಹೇಳಿದ್ದಾಗಿ ಭಟಿಂಡಾ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
“ಪ್ರಧಾನ ಮಂತ್ರಿಯ ಭದ್ರತಾ ಪಡೆಯೊಂದಿಗೆ ಡಿಜಿಪಿ ಕಾರ್ಯಾಲಯ ಸಂಪರ್ಕದಲ್ಲಿದ್ದು, ಅವರು ತೆರಳುವ ಮಾರ್ಗ ಸುಭದ್ರವಾಗಿದೆ ಎಂದು ಖಾತ್ರಿಯಾದ ಬಳಿಕವಷ್ಟೇ ಪ್ರಧಾನಿಯವರ ವಾಹನ ದಳ ವಿಮಾನ ನಿಲ್ದಾಣದಿಂದ ತೆರಳಿದೆ.
ಆ ಮಾರ್ಗದ ಪೂರ್ಣ ತಪಾಸಣೆ ಹಾಗೂ ಪ್ರಧಾನಿಯ ಸಮಾರಂಭ ಆಯೋಜಿಸಲಾಗಿದ್ದ ಸ್ಥಳವನ್ನು 4-5 ದಿನಗಳ ಹಿಂದೆಯೇ ವಶಕ್ಕೆ ಪಡೆಯಲಾಗಿತ್ತು ಎಂಬ ವಿಚಾರವನ್ನು ವಿಶೇಷ ಭದ್ರತಾ ದಳಕ್ಕೂ ಸಹ ಸ್ಪಷ್ಟಪಡಿಸಲಾಗಿತ್ತು,” ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿದ್ದು, ಮುಖ್ಯಮಂತ್ರಿ ಚನ್ನಿ ನೇಮಕ ಮಾಡಿದ್ದ ಸಂಪುಟದ ಸದಸ್ಯರೊಬ್ಬರು ಪ್ರಧಾನಿಯವರನ್ನು ಸ್ವಾಗತಿಸಿದ್ದಾರೆ ಎಂದು ತಿಳಿಸಿದೆ.
ರೈತರು ಫ್ಲೈಓವರ್ ಅನ್ನು ಅಡ್ಡಗಟ್ಟಿದ್ದ ಕಾರಣ ಪ್ರಧಾನಿಯವರ ಕಾರಿದ್ದ ಬೆಂಗಾವಲು ಪಡೆ ಆ ಫ್ಲೈಓವರ್‌ನಲ್ಲಿ 20 ನಿಮಿಷಗಳ ಕಾಲ ಸಿಲುಕಿಕೊಂಡಿತ್ತು.ಇದೇ ವೇಳೆ ಪ್ರಧಾನಿ ಬೆಂಗಾವಲು ಪಡೆಯ ಬಳಿ ಖಾಸಗಿ ವಾಹನಗಳು ಸಂಚರಿಸಿದ್ದು ಭದ್ರತೆಯ ಗಂಭೀರ ಲೋಪವಾದಂತೆ ಕಂಡಿತ್ತು.
ಪ್ರಧಾನಿಯ ಭದ್ರತೆಗೆ ಹೆಚ್ಚುವರಿ ಭದ್ರತೆಯನ್ನು ವ್ಯವಸ್ಥೆ ಮಾಡಲು ಪಂಜಾಬ್ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಲಾಗಿದೆ.