ನವದೆಹಲಿ: 7 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ನಡುವೆ ಯೋಗ ದಿನ ಆಶಾಕಿರಣವಾಗಿದೆ ಎಂದು ಹೇಳಿದ್ದಾರೆ.
ಕೊರೋನಾ ಕಾರಣದಿಂದ ಯೋಗ ದಿನದ ಉದ್ದೇಶ ಮತ್ತಷ್ಟು ಹೆಚ್ಚಾಗಿದೆ. ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಯೋಗ ಅಗತ್ಯವಾಗಿದೆ. ಆತ್ಮ ಬಲ ಹೆಚ್ಚಿಸಲು ಯೋಗ ಸಹಕಾರಿಯಾಗಿದೆ. ಆರೋಗ್ಯಕ್ಕಾಗಿ ಯೋಗ ಸಂದೇಶದೊಂದಿಗೆ ಯೋಗ ದಿನ ಆಚರಿಸಲಾಗುತ್ತಿದೆ. ನಮ್ಮ ಋಷಿಮುನಿಗಳು ಕಷ್ಟ-ಸುಖಗಳನ್ನು ಒಂದು ರೀತಿಯಲ್ಲಿ ನೋಡಿದ್ದರು ಎಂದು ಹೇಳಿದ್ದಾರೆ.
ಇಂದು ವಿಶ್ವವೇ ಕೊರೋನಾ ಮಹಾಮಾರಿ ಕೊರೋನಾದಿಂದ ನರಳುತ್ತಿದ್ದು, ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿಲ್ಲ. ಆದರೂ ಯೋಗದ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ. ಯೋಗ ನಮ್ಮನ್ನು ಕಾಪಾಡಲು ಸಹಕಾರಿಯಾಗಿದೆ. ಯೋಗದಿಂದ ಶ್ವಾಸಕೋಶಕ್ಕೆ ಲಾಭವಾಗುತ್ತದೆ ಜಗತ್ತಿನ ತಜ್ಞರು ತಿಳಿಸಿದ್ದಾರೆ. ಯೋಗಭ್ಯಾಸ ಕುರಿತು ಜನರಲ್ಲಿ ಒಲವು ಹೆಚ್ಚಾಗಿದೆ. ಪ್ರಾಣಾಯಾಮದಿಂದ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ. ರೋಗಗಳಿಗೆ ಯೋಗ ರಾಮಬಾಣವಾಗಿದೆ. ಅನೇಕ ದೇಶಗಳನ್ನು ಅಳವಡಿಸಿಕೊಂಡಿದ್ದು, ಶಾಲೆಗಳಲ್ಲಿಯೂ ಯೋಗ ತರಬೇತಿ ನಡೆಯುತ್ತಿದೆ ಎಂದು ಹೇಳಿದ್ದಾರೆ.